ಹುಬ್ಬಳ್ಳಿ: ಅವರೆಲ್ಲ ಸರ್ಕಾರದ ಹುಸಿ ಭರವಸೆಯನ್ನು ನೆಚ್ಚಿಕೊಂಡು ಕೆಲಸ ಮಾಡುತ್ತಿದ್ದವರು. ಜೀವನದಲ್ಲಿ ಕಷ್ಟವಿದ್ದರೂ ಸಹಾಯವಾಣಿಯ ಮೂಲಕ ಜನರ ಆರೋಗ್ಯ ಸಲಹೆ ನೀಡುತ್ತಿದ್ದವರು. ಈಗ ಅವರ ಬದುಕೇ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ. ಹಾಗಿದ್ದರೇ ಅಲ್ಲಿ ಆಗಿರುವ ಅನ್ಯಾಯವಾದರೂ ಏನು ಅಂತೀರಾ. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ರಾಜ್ಯ ಸರ್ಕಾರದ ಎಡವಟ್ಟಿನಿಂದಾಗಿ 400 ಜನರ ಬದುಕು ಬೀದಿಗೆ ಬಿದ್ದಿದೆ. 104 ಆರೋಗ್ಯ ಸಹಾಯವಾಣಿ ಕೇಂದ್ರಕ್ಕೆ ಬೀಗ ಹಾಕುವ ಮೂಲಕ ಸಿಬ್ಬಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಿನ್ನೆಯವರೆಗೂ ಆರೋಗ್ಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದ ಆರೋಗ್ಯ ಸಹಾಯವಾಣಿಯಲ್ಲಿ ಈಗ ಆರೋಗ್ಯ ಸಂಬಂಧಿತ ಮಾಹಿತಿಯೇ ಇಲ್ಲ. ಸಹಾಯವಾಣಿಗೆ ಕರೆ ಮಾಡಿದರೆ, ಬೆಂಗಳೂರಿಗೆ ಕನೆಕ್ಟ್ ಆಗುತ್ತಿದೆ. ಅಲ್ಲಿನ ಸಿಬ್ಬಂದಿಗೆ ಆರೋಗ್ಯ ಮಾಹಿತಿ ಕೇಳಿದರೆ ಅಪಡೇಟ್ ಇಲ್ವಂತೆ. ಕೊರೊನಾ ಸಂಕಷ್ಟದ ನಡುವೆಯೂ ಎದೆಗುಂದದೆ ಸಾರ್ವಜನಿಕರಿಗೆ ಆರೋಗ್ಯ, ಆಸ್ಪತ್ರೆಯ ಬೆಡ್, ರಕ್ತ ಸೇರಿದಂತೆ ವಿವಿಧ ಮಾಹಿತಿ ನೀಡಿ ಜನರಲ್ಲಿ ಧೈರ್ಯ ತುಂಬುತ್ತಿದ್ದ ಆರೋಗ್ಯ ಸಹಾಯವಾಣಿಗೆ ಈಗ ಬೀಗ ಬಿದ್ದಿದೆ.
2013 ರಲ್ಲಿ ರಾಜ್ಯದಲ್ಲಿ ಪ್ರಾರಂಭವಾಗಿದ್ದ ಆರೋಗ್ಯ ಸಹಾಯವಾಣಿ 104 ಅನ್ನು ಹೈದರಾಬಾದ್ ಮೂಲದ ಪಿರಾಮಲ್ ಎಂಬ ಸಂಸ್ಥೆ ಗುತ್ತಿಗೆ ಪಡೆದು ನಿರ್ವಹಿಸುತ್ತಿತ್ತು. ಇದೀಗ ಆ ಸಂಸ್ಥೆ ಈ ಯೋಜನೆಯಿಂದ ಹೊರ ಬಂದಿದೆ. ತನ್ನೆಲ್ಲ ಸಿಬ್ಬಂದಿಗೆ ಕಳೆದ 15 ಕೊನೆಯ ದಿನದ ಸೇವೆ ಎಂದು ಟರ್ಮಿನೇಷನ್ ಲೇಟರ್ ಕೊಟ್ಟಿದೆ. ಸಿಬ್ಬಂದಿಗೆ ಕೊಡಬೇಕಾದ ಸೌಲಭ್ಯಗಳನ್ನು ಅರೆಬರೆ ಕೊಟ್ಟು ಕೈ ತೊಳೆದುಕೊಂಡಿದೆ. ಹೀಗಾಗಿ ಹುಬ್ಬಳ್ಳಿಯ ಆರೋಗ್ಯ ಸಹಾಯವಾಣಿಗೆ ಬೀಗ ಹಾಕಲಾಗಿದೆ.
ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 250 ಹಾಗೂ ಬೆಂಗಳೂರು ವ್ಯಾಪ್ತಿಯ 150 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಸಂಸ್ಥೆ ಸಿಬ್ಬಂದಿಗೆ ಬಾಕಿ ಇದ್ದ 2.5 ತಿಂಗಳ ವೇತನ ನೀಡಿದೆ. ಆದ್ರೆ ನಿಯಮದ ಪ್ರಕಾರ ಕಳೆದ ಐದು ವರ್ಷದಿಂದ ನೀಡಬೇಕಾದ ಗ್ರ್ಯಾಚುಟಿ ಹಣವನ್ನು ನೀಡದೆ ಕೇವಲ ತಿಂಗಳ ಹಣವನ್ನು ಮಾತ್ರ ನೀಡಿದೆ. ಅಲ್ಲದೆ, ಎಲ್ಲಾ ಸವಲತ್ತುಗಳನ್ನು ಕೊಡದೆ ಸಿಬ್ಬಂದಿಗೆ ಎಲ್ಲ ಸವಲತ್ತುಗಳನ್ನು ನೀಡಲಾಗಿದೆ. ಮುಂದೆ ಕಂಪನಿ ವಿರುದ್ಧ ಯಾವುದೇ ದೂರು, ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಪತ್ರಕ್ಕೆ ಸಹಿ ಮಾಡಿಸಿಕೊಳ್ಳುತ್ತಿದೆ.
Kshetra Samachara
21/02/2022 04:18 pm