ದಾರವಾಡ: ಜನ್ಮಜಾತ ಹೃದಯ ಕಾಯಿಲೆಗಳು ಹುಟ್ಟಿನಿಂದ ಬರುವ ಹೃದಯ ತೊಂದರೆಗಳಾಗಿವೆ. ಈ ರೀತಿಯ ತೊಂದರೆ 1000 ಮಕ್ಕಳ ಜನನದಲ್ಲಿ ಎಂಟು ಮಕ್ಕಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಪ್ರತಿ ದಿನ ಸುಮಾರು 400 ಮಕ್ಕಳು ಹೃದಯ ಕಾಯಿಲೆಯಿಂದ ಜನಿಸುತ್ತಾರೆ ಅಂದರೆ ಒಂದು ವರ್ಷದಲ್ಲಿ ಎರಡು ಲಕ್ಷ ಮಕ್ಕಳಲ್ಲಿ ಹೃದಯ ಕಾಯಿಲೆ ಕಂಡುಬರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇಂತಹ ಮಕ್ಕಳು ಹೆಚ್ಚಾಗಿ ಮರಣ ಹೊಂದುತ್ತಾರೆ ಅಥವಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿ ಬೆಳೆಯುತ್ತಾರೆ ಎಂದು ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್‌ನ ಹಿರಿಯ ಮತ್ತು ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ. ರವಿವರ್ಮ ಪಾಟೀಲ್ ರವರು ಹೇಳಿದ್ದಾರೆ.
ಚಿಕ್ಕಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ವಿಧಾನಗಳಾದ ಎ ಎಸ್ ಡಿ,ವಿ ಎಸ್‌ಡಿ, ಪಿ ಡಿ ಎ. ಟಿಓಎಫ್/ ಟಿಎಪಿವಿಸಿ / ಟಿಎಜಿ. ವಿಎಸ್‌ಡಿ ಡಿವೈಸ್ ಕ್ಲೋಸರ್, ಆರ್ ವಿ ಓ ಟಿ, ಪಿ ಡಿ ಎ ಸ್ಟೆಂಟಿಂಗ್ ಮುಂತಾದ ಹೈಬ್ರಿಡ್ ಸಂಕೀರ್ಣ ಶಸ್ತ್ರಚಿಕಿತ್ಸೆಗಳು. ಎ ಎಸ್ ಡಿ ಕ್ಲೋಸರ್, ಟಿ ಎಪಿವಿಸಿ ಸರಿಪಡಿಸುವುದು ಮುಂತಾದ ಕ್ಲಿಷ್ಟಕರ ಹೃದಯ ಶಸ್ತ್ರಚಿಕಿತ್ಸೆಗಳು. ಮಕ್ಕಳ ಕವಾಟ ಸರಿಪಡಿಸುವ ಇತ್ಯಾದಿ ಚಿಕಿತ್ಸೆಗಳನ್ನು ನಿರಂತರವಾಗಿ ನಮ್ಮ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಜನ್ಮಜಾತವಾಗಿ ಬರುವ ಎಎಸ್‌ಡಿ, ವಿಎಸ್‌ಡಿ, ಪಿಡಿಎ, ಇವುಗಳ ರೋಗಪತ್ತೆ ಚಿಕಿತ್ಸೆಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಡಿಜಿಟಲ ಮಾಧ್ಯಮಗಳನ್ನು ಬಳಸಿ (ವಾಟ್ಸಾಪ್, ಯುಟ್ಯೂಬ್) ಮೂಲಕ ಮಾಹಿತಿ ನೀಡಲಾಗಿದೆ ಎಂದು ಚಿಕ್ಕ ಮಕ್ಕಳ ಹೃದಯ ರೋಗ ತಜ್ಞ ಡಾ. ಅರುಣ್ ಬಬ್ಲೆಶ್ವರ್ ಹೇಳಿದರು.
ಎಸ್‌ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಕರ್ನಾಟಕದ ಹೆಸರಾಂತ ಹೃದಯ ರೋಗ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಇದು ವಿಶೇಷವಾಗಿ ಹೃದಯ ತೊಂದರೆ ಇರುವ ಮಕ್ಕಳ ಚಿಕಿತ್ಸೆಯಲ್ಲಿ ತನ್ನದೇ ಆದ ಹೆಸರನ್ನು ಮಾಡಿದೆ ಇಲ್ಲಿ ನಾಲ್ಕು ದಿನದ ಮಗುವಿನಿಂದ ಹಿಡಿದು ಜನ್ಮಜಾತವಾಗಿ ಹೃದಯ ರೋಗದಿಂದ ಬಳಲುವ 50ವರ್ಷದ ವಯಸ್ಕರರವರೆಗೂ ಅತ್ಯುತ್ತಮ ಫಲಿತಾಂಶದೊಂದಿಗೆ ಚಿಕಿತ್ಸೆಯನ್ನು ನೀಡುತ್ತಿದೆ.ಈ ಕೇಂದ್ರವು ಬಿಪಿಎಲ್ ಎಪಿಎಲ್ ಆಯುಷ್ಮಾನ ಭಾರತದಂತಹ ಇತ್ಯಾದಿ ಸರ್ಕಾರಿ ಯೋಜನೆ ಪ್ರಯೋಜನೆಗಳನ್ನು ನೀಡುವದಲ್ಲದೆ ವಿವಿಧ ಆರೋಗ್ಯ ವಿಮೆಗಳ ಅಡಿಯಲ್ಲಿ ಒಳಗೊಳ್ಳುವವರಿಗೆ ನಗದು ರಹಿತ ಸಹಾಯವನ್ನು ಸಹ ನೀಡುತ್ತಿದೆ. ಎಂದು ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ವೈದ್ಯಕೀಯ ಅಧೀಕ್ಷಕರು ಆದಂತಹ ಡಾ. ಕೀರ್ತಿ ಪಿ ಎಲ್ ರವರು ಮಾಹಿತಿ ನೀಡಿದರು.
Kshetra Samachara
16/02/2022 03:39 pm