ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಒಂದಿಲ್ಲೊಂದು ಅವ್ಯವಸ್ಥೆ ತಲೆದೋರುತ್ತಲೆ ಇದೆ. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿಯೇ ಯಾವುದಾದರೊಂದು ಸಮಸ್ಯೆ ಸುಳಿಯಲ್ಲಿ ಕಿಮ್ಸ್ ಸಿಲುಕಿಕೊಳ್ಳುತ್ತಿದೆ. ಅಲ್ಲದೆ ಬಂದಿರುವ ಉಪಕರಣ ಸರಿಯಾಗಿ ಸದ್ಬಳಿಕೆ ಮಾಡಿಕೊಳ್ಳದೇ ಕಿಮ್ಸ್ ಲಕ್ಷಾಂತರ ರೂಪಾಯಿ ಹಣವನ್ನು ಹೊಳೆಯಲ್ಲಿ ಹೋಮ ಮಾಡಿದೆ.
ಹೌದು..ಕಿಮ್ಸ್ ಆಸ್ಪತ್ರೆಯಲ್ಲಿ ಕಿಯೋಸ್ಕ್ ಮಷಿನಗಳು ಉಪಯೋಗಕ್ಕೆ ಬಾರದ ಸ್ಥಿತಿಯನ್ನು ತಲುಪಿವೆ. 50 ಸಾವಿರ ವೆಚ್ಚದ ಕಿಯೋಸ್ಕ್ ಮಷಿನ್ ಗಳನ್ನು ವ್ಯಾಕ್ಸಿನ್ ರಿಜಿಸ್ಟರ್ ಗೆ ಉಪಯೋಗಕ್ಕೆ ಬಳಸಲಾಗುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಹಾಳಾಗಿ ಹೋಗಿವೆ. ಈಗಾಗಲೇ 6 ಮಷಿನ್ ಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯು ತರಿಸಿದ್ದು, ತಾಂತ್ರಿಕ ದೋಷಗಳಿಂದ ಕಾರ್ಯನಿರ್ವಹಿಸದ ಬಂದ್ ಆಗಿವೆ. ಇದರಿಂದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ.
ಇನ್ನೂ ಧಾರವಾಡದ ಐ.ಐ.ಟಿ ಕಾಲೇಜು ಸಿದ್ಧಪಡಿಸಿದ್ದ ಕಿಯೋಸ್ಕ್ ಮಷಿನ್ ಗಳು. ಕಿಮ್ಸ್ ಗೆ ಬಂದ ಕೆಲವೇ ದಿನಗಳಲ್ಲೇ ಕೆಟ್ಟು ನಿಂತಿವೆ. ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ಸಿದ್ಧಪಡಿಸಿದ್ದ ಧಾರವಾಡದ ಐ.ಐ.ಟಿ. ಈ ಮಷಿನ್ ಗಳು ವ್ಯಾಕ್ಸಿನ್ ಗೆ ಅನುಕೂಲವಾಗಲು ಬಳಕೆಯಾಗುತ್ತಿತ್ತು. ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳುವವರ ಹೆಸರು,ಆಧಾರ್ ನಂಬರ್, ವಯಸ್ಸು ರಿಜಿಸ್ಟರ್ ಮಾಡಿದರೆ ಸಾಕು ಅವರ ಇತಿಹಾಸವೇ ಕಿಯೋಸ್ಕ್ ನಲ್ಲಿ ಬರುತ್ತಿತ್ತು. ಇದರಿಂದ ವ್ಯಾಕ್ಸಿನ್ ಹಾಕುವ ಆರೋಗ್ಯ ಸಿಬ್ಬಂದಿಗೆ ಸಮಯದ ಉಳಿತಾಯವಾಗುತ್ತಿತ್ತು. ಅಲ್ಲದೆ ಸಾರ್ವಜನಿಕರಿಗೆ ಘಂಟೆಗಟ್ಟಲೇ ಕಾಯುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಪ್ರಸ್ತುತವಾಗಿ ಕಿಯೋಸ್ಕ್ ಮಷಿನ್‌ಗಳು ಉಪಯೋಗಕ್ಕೆ ಬಾರದೆ ದೂಳು ತಿನ್ನುತ್ತಿವೆ.
ಒಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಷಿನ್ ತಂದರೂ ಉಪಯೋಗಕ್ಕೆ ಬಾರದಂತಾಗಿದ್ದು, ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಕಿಮ್ಸ್ ಹಾಗೂ ಜಿಲ್ಲಾಡಳಿತ ಸೂಕ್ತ ನಿರ್ವಹಣೆ ವ್ಯವಸ್ಥೆ ಮೂಲಕ ಹಾಳಾಗಿ ಹೋಗುವ ಸಂಪನ್ಮೂಲಗಳ ಸದ್ಬಳಕೆ ಮಾಡಬೇಕಿದೆ.
Kshetra Samachara
11/02/2022 10:41 am