ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸರ್ಕಾರಕ್ಕೆ ಕೇಳುತ್ತಿಲ್ಲವೇ ನಮ್ಮ ಕಷ್ಟ : ವೇತನ ನೀಡಿ

ಹುಬ್ಬಳ್ಳಿ: 104 ಆರೋಗ್ಯ ಸಹಾಯವಾಣಿ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

240 ಸಿಬ್ಬಂದಿಗಳು ಹುಬ್ಬಳ್ಳಿಯಲ್ಲಿರುವ ಆರೋಗ್ಯ ಸಹಾಯವಾಣಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 108 ಆಂಬ್ಯೂಲೆನ್ಸ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ. ಆದರೆ ಸರಕಾರ ಮಾತ್ರ ಇವರ ಕಡೆ ಗಮನ ಹರಿಸುತ್ತಿಲ್ಲ.

ಕೊರೊನಾ ವೈರಸ್ ಸಂದರ್ಭದಲ್ಲೂ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಿದ ಇವರಿಗೆ ಸರಕಾರ ಇಲ್ಲಿಯವರೆಗು ಇನ್ಸೆಂಟಿವ್ ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ವೇತನವನ್ನು ಹೆಚ್ಚು ಮಾಡಿಲ್ಲ. ಕೆಲಸಕ್ಕೆ ಸೇರಿದಾಗ ಇವರ ವೇತನ ಎಷ್ಟಿತ್ತೊ ಇವಾಗಲೂ ಅಷ್ಟೇ ಇದೆ. ಈ ಎಲ್ಲಾ ಬೇಡಿಕೆಗಳನ್ನು ಇಡೇರಿಸುವಂತೆ ಆರೋಗ್ಯವಾಣಿ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

Edited By : Manjunath H D
Kshetra Samachara

Kshetra Samachara

07/10/2021 02:13 pm

Cinque Terre

26.92 K

Cinque Terre

1

ಸಂಬಂಧಿತ ಸುದ್ದಿ