ಹುಬ್ಬಳ್ಳಿ: ಮನುಷ್ಯನಿಗೆ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 108 ಆಂಬ್ಯುಲೆನ್ಸ್ ಯೋಜನೆ ತಂದು ಈಗಾಗಲೇ ಸರ್ಕಾರ ಸಾಕಷ್ಟು ಜನರ ಜೀವನ ಉಳಿಸಿದೆ. ಅದೇ ರೀತಿಯಾಗಿ ತುರ್ತು ಸಂದರ್ಭಗಳಲ್ಲಿ ಪ್ರಾಣಿಗಳ ಜೀವ ಉಳಿಸಲು ಪಶು ಸಂಜೀವಿನಿ ಎಂಬ ಯೋಜನೆ ತಂದಿದ್ದು, ಆದ್ರೆ ಈ ಯೋಜನೆಗೆ ತಂದ ಆಂಬ್ಯುಲೆನ್ಸ್ ವಾಹನಗಳು ಇದೀಗ ಸರಿಯಾಗಿ ಸದ್ಬಳಕೆ ಆಗದೆ ಈ ಯೋಜನೆ ಹಳ್ಳ ಹಿಡಿಯುವ ಲಕ್ಷಣ ಕಾಣುತ್ತಿದೆ. ಅಷ್ಟಕ್ಕೂ ಏನಿದು ಆಂಬ್ಯುಲೆನ್ಸ್ ಕಥೆ ಅಂತೀರಾ ಈ ಸ್ಟೋರಿ ನೋಡಿ....
ಹೀಗೆ ಹೊಸದಾಗಿ ಪಶು ಸಂಜೀವಿನಿ ಎಂಬ ಹೆಸರಿನ ಜೊತೆಗೆ ಪಿಎಂ, ಸಿಎಂ ಹಾಗೂ ಮಿನಿಸ್ಟರ್ ಚಿತ್ರ ಇರುವ ಈ ವಾಹನಗಳು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹುಬ್ಬಳ್ಳಿಯ ಪಶು ಇಲಾಖೆಗೆ ಹಂಚಿಕೆಯಾದ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಆದ್ರೆ ಈ ವಾಹನಗಳು ಕಳೆದ ಒಂದು ತಿಂಗಳಿಂದ ದೇಶಪಾಂಡೆ ನಗರದಲ್ಲಿ ನಿಲ್ಲಿಸಿ ಹೋಗಿದ್ದು ಯಾವೊಬ್ಬ ಅಧಿಕಾರಿಗಳು ಕೂಡಾ ಇತ್ತ ಗಮನಹರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೂಡಾ ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿ ತಾಲೂಕಿನ ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿಯನ್ನು ಕೇಳಿದ್ರೆ ಅವರು ಹೇಳೋದು ಹೀಗೆ.
ಒಟ್ಟಿನಲ್ಲಿ ಸರ್ಕಾರ ಪಶುಗಳ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಲುವಾಗಿ ಕೋಟಿ ಕೋಟಿ ಖರ್ಚು ಮಾಡಿ ಪಶು ಸಂಜೀವಿನಿ ಯೋಜನೆಗಳನ್ನು ತಂದ್ರು ಕೂಡಾ ಯೋಜನೆಗಳು ಸದ್ಬಳಕೆ ಆಗದೆ ಇದೀಗ ದುರ್ಬಳಕೆ ಆಗುತ್ತಿದ್ದು, ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/09/2022 05:30 pm