ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ; ಒಂದೇ ಗಂಟೆಯಲ್ಲಿ ಪಶು ಆಸ್ಪತ್ರೆಗೆ ಆಂಬ್ಯುಲೆನ್ಸ್‌ ಶಿಫ್ಟ್‌

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಪಶು ಇಲಾಖೆಯ ಅಧಿಕಾರಿಗಳು, ವರದಿ ಪ್ರಸಾರವಾದ 1 ಗಂಟೆ ಅವಧಿಯಲ್ಲಿ ಒಂದು ತಿಂಗಳಿನಿಂದ ನಿಂತಿದ್ದ ಆಂಬ್ಯುಲೆನ್ಸ್ ವಾಹನಗಳನ್ನು ವಾಡಿಯಾ ಪಶು ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು.

ಹೌದು ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ಇಂದು ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಒಂದು ತಿಂಗಳಿನಿಂದ ದೇಶಪಾಂಡೆ ನಗರದಲ್ಲಿ ನಿಂತಿದ್ದ ಪಶು ಸಂಜೀವಿನಿ ಆಂಬ್ಯುಲೆನ್ಸ್ ವಾಹನಗಳ ಬಗ್ಗೆ ವಿಸ್ತೃತವಾದ ವರದಿಯನ್ನು ಮಾಡಿತ್ತು,ವರದಿ ಪ್ರಸಾರವಾಗುತ್ತಿದ್ದ ಒಂದೇ ಗಂಟೆಯ ಅವಧಿಯಲ್ಲಿ ಪಶು ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು.

ದೇಶಪಾಂಡೆ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ನಿಂತಿದ್ದ ಪಶು ಸಂಜೀವಿನಿ ಆಂಬ್ಯುಲೆನ್ಸ್ ವಾಹನಗಳನ್ನು ಪಶು ಆಸ್ಪತ್ರೆ ಕೇಂದ್ರಕ್ಕೆ ಒಯ್ಯುವ ಕಾರ್ಯವನ್ನು ಮಾಡಿದ್ದಾರೆ. ನಮ್ಮ ವರದಿಗೆ ಎಚ್ಚೆತ್ತು ವಾಹನಗಳನ್ನು ತರಿಸಿದ ಪಶು ಇಲಾಖೆಯ ಅಧಿಕಾರಿಗಳು ಇನ್ನು ಮೇಲಾದರೂ ಪಶು ಸಂಜೀವಿನಿ ಆಂಬ್ಯುಲೆನ್ಸ್ ವಾಹನಗಳನ್ನು ಪಶುಗಳಿಗೋಸ್ಕರ ಸದ್ಬಳಕೆ ಮಾಡಿಕೊಳ್ಳುವ ಕಾರ್ಯವನ್ನು ಮಾಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Manjunath H D
Kshetra Samachara

Kshetra Samachara

21/09/2022 08:56 pm

Cinque Terre

80.23 K

Cinque Terre

3

ಸಂಬಂಧಿತ ಸುದ್ದಿ