ಕುಂದಗೋಳ: ಇಲ್ಲೊಂದು ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣವಾಗಿದೆ. ಆದ್ರೇ,! ಚಿಕಿತ್ಸೆ ನೀಡಲು ವೈದ್ಯರೇ ಇಲ್ಲಾ. ಸೂಕ್ತ ಔಷಧಿ ಸರಬರಾಜು ಇಲ್ಲಾ, ಎಲ್ಲದಕ್ಕಿಂತ ಮುಖ್ಯವಾಗಿ ಈ ನೂತನ ಪಶು ಚಿಕಿತ್ಸಾಲಯ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ! ಇಂತಹ ಆರೋಪಿಗಳಿಗೆ ಸಾಕ್ಷಿಯಾಗಿರುವುದೇ ಕುಂದಗೋಳ ತಾಲೂಕಿನ ಕಳಸ ಗ್ರಾಮದ ಪಶು ಚಿಕಿತ್ಸಾಲಯ.
ಈ ಆಸ್ಪತ್ರೆ ನಿರ್ಮಾಣವಾಗಿ ಆರು ತಿಂಗಳು ಕಳೆದರೂ ಇಂದಿಗೂ ಉದ್ಘಾಟನೆ ಕಂಡಿಲ್ಲಾ. ನಿತ್ಯ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಅರಸಿ ಬರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ವೈದ್ಯರೇ ಇಲ್ಲಾ. ಈ ಕಾರಣ ಜಾನುವಾರುಗಳ ಸಾವು ನೋವಿನ ಸಂಖ್ಯೆ ಈ ಭಾಗದಲ್ಲಿ ಹೆಚ್ಚುತ್ತಲೆ ಇದೆ.
ಇದಲ್ಲದೆ ಕಳಸ, ಹರ್ಲಾಪೂರ, ಸಂಕ್ಲಿಪುರ, ಸುಲ್ತಾನಪುರ ಸೇರಿ ಸುತ್ತಮುತ್ತಲಿನ ಹಳ್ಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆ ಖಾಯಂ ಬೀಗ ಜಡಿದಿದ್ದು, ರೈತರು ಜಾನುವಾರು ಕಟ್ಟಿಕೊಂಡು ವೈದ್ಯರ ದಾರಿ ಕಾಯುವ ದುಸ್ಥಿತಿಗೆ ಉತ್ತರ ಅಸ್ಪಷ್ಟವಾಗಿದೆ.
38 ಲಕ್ಷಕ್ಕೂ ಅಧಿಕ ವೆಚ್ಚದ ಕಳಸ ಗ್ರಾಮದ ನೂತನ ಪಶು ಚಿಕಿತ್ಸಾಲಯ ಕಾಮಗಾರಿಯ ವಿವರವನ್ನು ಮಾಹಿತಿ ಹಕ್ಕಿನ ಮೂಲಕ ಪಡೆದ ಗ್ರಾಮಸ್ಥರು ಪ್ರತಿಗಳನ್ನು ಪ್ರದರ್ಶಿಸಿ ಕಾಮಗಾರಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ಇತ್ತ ಆಸ್ಪತ್ರೆ ಇದ್ದರೂ ವೈದ್ಯರಿಲ್ಲದೆ, ಚಿಕಿತ್ಸೆ ಇಲ್ಲದೆ ರೈತಾಪಿ ಜನರು ಲಕ್ಷ ಲಕ್ಷ ಬೆಲೆ ಬಾಳುವ ಜಾನುವಾರು ಕಳೆದುಕೊಂಡು ಕಣ್ಣೀರಿಡುವ ಸ್ಥಿತಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಉತ್ತರ ನೀಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
14/06/2022 03:37 pm