ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೊಸಯಲ್ಲಾಪುರ ಅಲ್ರಪ್ಪಾ ಇದು ಹೊಲಸಾಪುರ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಧಾರವಾಡದ ಹೊಸಯಲ್ಲಾಪುರದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಹೀಗಾಗಿ ಹೊಸಯಲ್ಲಾಪುರ ಎಂದು ಕರೆಯಲ್ಪಡುವ ಈ ಏರಿಯಾವನ್ನು ಇದೀಗ ಹೊಲಸಾಪುರ ಎಂದು ಕರೆಯುವಂತಾಗಿದೆ.

ಈ ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರಬರುತ್ತಿದ್ದ ವಿಷಕಾರಿ ಹೊಗೆ ಮಳೆಗಾಲದಲ್ಲಿ ತುಸು ತಣ್ಣಗಾಗಿತ್ತು. ಆದರೆ, ಇದೀಗ ಮಳೆಗಾಲ ಮುಗಿದಿದ್ದರಿಂದ ಮತ್ತೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ ಬೀಳುತ್ತಿದ್ದು, ವಿಷಕಾರಿ ಹೊಗೆ ಅಲ್ಲಿನ ಜನರಿಗೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ.

ಧಾರವಾಡ ನಗರದಾದ್ಯಂತ ಸಂಗ್ರಹಿಸಲಾಗುವ ತ್ಯಾಜ್ಯವನ್ನು ಈ ಹೊಸಯಲ್ಲಾಪುರದಲ್ಲಿರುವ ವಿಲೇವಾರಿ ಘಟಕಕ್ಕೆ ತಂದು ಹಾಕಲಾಗುತ್ತಿದೆ. ಅನೇಕ ವರ್ಷಗಳಿಂದ ಈ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಇದ್ದು, ಈ ಸಂಬಂಧ ಉಪವಾಸ ಸತ್ಯಾಗ್ರಹ ಮಾಡಿದ್ದ ಸಂತೋಷ ನಂದೂರ ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಮಹಾನಗರ ಪಾಲಿಕೆ ಆಯುಕ್ತರ ಮೇಲೆಯೇ ದೂರು ದಾಖಲಿಸುವ ಮಾತು ಹೇಳಿದ್ದಾರೆ.

ಈ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗಾಗ ಬೆಂಕಿ ಬೀಳುತ್ತಿರುವುದರಿಂದ ಅದರ ಸುತ್ತಮುತ್ತಲ ನಿವಾಸಿಗಳು ತೊಂದರೆಪಡುವಂತಾಗಿದೆ. ವಿಷಾನೀಲ ಹೊರಬೀಳುತ್ತಿದ್ದು, ಅನೇಕರು ಕಾಯಿಲೆ ಬೀಳುತ್ತಿದ್ದಾರೆ.

ಜನ್ನತ ನಗರ, ಲಕ್ಷ್ಮೀ ನಗರ, ದಾನೇಶ್ವರ ನಗರ, ಗಾಂಧಿ ನಗರ, ಹೊಸಯಲ್ಲಾಪುರ ಸೇರಿದಂತೆ ಹಲವು ನಗರಗಳ ಜನತೆಗೆ ಈ ಘನತ್ಯಾಜ್ಯ ವಿಲೇವಾರಿ ಘಟಕ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೀಳುತ್ತಿರುವ ಬೆಂಕಿಯಿಂದಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

Edited By : Manjunath H D
Kshetra Samachara

Kshetra Samachara

18/11/2020 05:06 pm

Cinque Terre

48.5 K

Cinque Terre

7

ಸಂಬಂಧಿತ ಸುದ್ದಿ