ಹುಬ್ಬಳ್ಳಿ: ಬಿಲ್ಡಿಂಗ್ ನಿರ್ಮಾಣದ ವೇಳೆಯಲ್ಲಿ ಕಟ್ಟಿರುವ ಕಟ್ಟಿಗೆಯ ಸಾರ್ ಕಳಚಿ ಬಿದ್ದು ಸುಮಾರು ಆರು ವಾಹನಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ ತುರ್ತು ಚಿಕಿತ್ಸಾ ವಿಭಾಗದ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ಬಳಿಯಲ್ಲಿ ನಡೆದಿದೆ.
ಕಾರ್ಮಿಕರ ಹಾಗೂ ಗುತ್ತಿಗೆದಾರರ ಅಜಾಗರೂಕತೆಯಿಂದ ಇಂತಹದೊಂದು ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೃಹತ್ ಗಾತ್ರದಲ್ಲಿ ಕಟ್ಟಿದ್ದ ಕಟ್ಟಿಗೆಯ ಸಾರ್ ಏಕಾಏಕಿ ಕಳಚಿ ಬಿದ್ದಿದ್ದು, ಸ್ಥಳದಲ್ಲಿಯೇ ಪಾರ್ಕ್ ಮಾಡಿದ್ದ ಆರು ವಾಹನಗಳು ಜಖಂಗೊಂಡಿದೆ.
ಇನ್ನೂ ಈ ಕಟ್ಟಡ ಅಡಿಯಲ್ಲಿ ದಿನವೂ ಸುಮಾರು ಜನ ರೋಗಿಗಳ ಸಿಬ್ಬಂದಿಗಳು ನಿಲ್ಲುತ್ತಿದ್ದರು ಆದರೆ ಇಂದು ಮಳೆ ಬಂದ ಕಾರಣ ಯಾರೊಬ್ಬರೂ ಅಲ್ಲಿ ಇಲ್ಲದಿರುವುದು ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿದಂತಾಗಿದೆ.
Kshetra Samachara
15/06/2022 06:22 pm