ಹುಬ್ಬಳ್ಳಿ: ಕೊರೋನಾ ವೈರಸ್ ಹೋಯಿತೇನ್ರಿ ಸರ್...ಯಾಕ್ರಿ ಹಿಂಗ ಕೇಳ್ತಿದ್ದೀರಿ ಕೊರೋನಾ ಅಂದ್ರೇ ಅದೇನು ನಿಮ್ಮ ಊರಿನ ವಸ್ತಿ ಬಸ್ ಮಾಡಿದ್ರೇನು.
ಬೇಕು ಅಂದಾಗ ಬರೋಕೆ ಬ್ಯಾಡ ಅಂದಾಗ ಹೋಗೋಕೆ. ಆದರೂ ನಮಗ ಮಿನಿ ವಿಧಾನಸೌಧದಾಗ ನೋಡಿದ್ರೇ ಕೊರೋನಾ ವೈರಸ್ ಒಟ್ಟ ಬಂದಿಲ್ಲ ಬಿಡು ಅನಸ್ತೈತಿ ನೋಡ್ರಿ. ಯಾಕ್ರಿ ಹಿಂಗ ಅಂತಿದ್ದೀರಾ ಅಂತಿರಿ ಅಲ್ವ ಇಲ್ಲಿ ನೋಡ್ರಿ ಸ್ವಲ್ಪ...
ಅರೇ....ಏನ್ರಿ ಇದು ಗಿಜಿ ಗಿಜಿ ಅಂತಿದೆ..ಎಲ್ಲೆಂದರಲ್ಲಿ ಜನ ನಿಂತಾರ ಅದೇನೂ ಮುಖಕ್ಕೆ ಮಾಸ್ಕ್ ಅಂತಾರಲ್ಲ ಅದು ಅಲ್ಲೊಬ್ಬರು ಇಲ್ಲೊಬ್ಬರು ಹಕ್ಕೊಂಡಾರ..ಆದ್ರೂ ಸಾಮಾಜಿಕ ಅಂತರ ಅನ್ನೊದು ಅತಂತ್ರ ಆಗೇತಿ ನೋಡ್ರಿ..ಒಟ್ಟಿನಲ್ಲಿ ಮೊದಲ ಇದ್ದ ಭಯ ಈಗ ಜನರಿಗೆ ಇಲ್ಲದಂಗಾಗಿದೆ.
ವೃದ್ಧಾಪ್ಯದ ವೇತನ ಹಾಗೂ ಇನ್ನೂ ಏನೆನೋ ಕೆಲಸಕ್ಕೆ ಬಂದಿರುವ ನಮ್ಮ ಜನ ಸಾಮಾಜಿಕ ಅಂತರ ಇಲ್ಲ.ಕೊರೋನಾದ ಆತಂಕನೂ ಇಲ್ಲದಂತೆ ಆಗಿತೇ.ಅಷ್ಟೇ ಅಲ್ಲರೀ ಮಿನಿವಿಧಾನಸೌಧದ ಅವ್ಯವಸ್ಥೆ ಕುರಿತು ಪಬ್ಲಿಕ್ ನೆಕ್ಸ್ಟ್ ಅವರು ಸಾಕಷ್ಟು ವರದಿ ಮಾಡಿದರು ಮತ್ತೂ ಎಲ್ಲೆಂದರಲ್ಲಿ ಉಗುಳುವುದು ಬೇಕಾಬಿಟ್ಟಿ ಕಸ ಚೆಲ್ಲುವುದು ನೋಡಿದ್ರೇ ಇನ್ನೂ ಯಾವಾಗ ಸುಧಾರಣೆ ಕಾಣುತ್ತೋ ಅನಿಸಿಬಿಟ್ಟಿದೇ.
Kshetra Samachara
29/10/2020 06:37 pm