ಹುಬ್ಬಳ್ಳಿ: ವಸತಿ ಶಾಲಾ ಮಕ್ಕಳಿಗೆ ಕಳಪೆ ಮಟ್ಟದ ಆಹಾರ ನಿಡುತ್ತಿದ್ದನ್ನು ಗಮನಿಸಿದ ಮಕ್ಕಳ ಪೋಷಕರು, ವಸತಿ ಶಾಲೆಗೆ ಹೋಗಿ ಹಾಸ್ಟೆಲ್ ವಾರ್ಡ್‌ನ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಕಲಘಟಗಿ ತಾಲ್ಲೂಕಿನ ಗಂಜಿಗಟ್ಟಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳ ಆಹಾರಕ್ಕಾಗಿ ಸರ್ಕಾರದಿಂದ ಪ್ರತಿ ತಿಂಗಳ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ ವಾರ್ಡನ್ ಮಾತ್ರ ಮಕ್ಕಳಿಗೆ ಗುಣಮಟ್ಟದ ಆಹಾರ ನಿಡುತ್ತಿಲ್ಲವಂತೆ. ಇನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಈ ವಸತಿ ಶಾಲೆಯಲ್ಲಿ, ಇಲಾಖೆಯ ಗೈಡ್ ಲೈನ್ಸ್ ಪ್ರಕಾರ ಊಟದ ಮೇನು ಚಾರ್ಟ್ ಪ್ರಕಾರ ಊಟ ಮತ್ತು ತಿಂಡಿಯನ್ನ ನೀಡಬೇಕು.
ಆದರೆ ವಿದ್ಯಾರ್ಥಿಗಳು ಮಾಡುತ್ತಿರುವ ಆರೋಪದ ಪ್ರಕಾರ, ಈ ವಸತಿ ಶಾಲೆಯಲ್ಲಿ ಇಲ್ಲಿವರೆಗೂ ವಾರ್ಡನ್ ಮೇನು ಚಾರ್ಟ್ ತೋರಿಸಿಯೇ ಇಲ್ಲವಂತೆ. ಎಲ್ಲಿ ಮೇನು ಚಾರ್ಟ್ನ ತೋರಿಸಿದರೆ ವಿದ್ಯಾರ್ಥಿಗಳು ಅದರ ಪ್ರಕಾರ ಊಟ ಕೇಳುತ್ತಾರೆ ಅಂತ ವಾರ್ಡನ್ ಮೇನು ಚಾರ್ಟ್ ಇಲ್ಲಿವರೆಗೆ ತೋರಿಸಿಲ್ಲವಂತೆ.
ಕಳಪೆ ಮಟ್ಟದ ಊಟವನ್ನು ನೀಡಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿದ್ದಾರಂತೆ. ಕಳಪೆ ಆಹಾರದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಉದಾಹರಣೆ ಕೂಡ ಇದೆ. ಇದೆ ಕಾರಣದಿಂದ ವಿದ್ಯಾರ್ಥಿಗಳಿಗೆ ರಕ್ತದ ಕೊರತೆ ಎದುರಾಗಿದೆ. ಕೂಡಲೇ ಈ ವಸತಿ ನಿಲಯದ ವಾರ್ಡನ್‌ನ್ನು ವಜಾಗೋಳಿಸಬೇಕೆಂದು ಪಾಲಕರು ಹಾಸ್ಟೆಲ್ ಮುಂದೆ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಇಲ್ಲಿನ ಮೊರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಆಹಾರ ಕೊರತೆ ಎದುರಾಗಿದ್ದು, ಮಕ್ಕಳ ಪ್ರಾಣದ ಜೊತೆಗೆ ಆಟವಾಡುವ ವಸತಿ ಶಾಲೆಯ ವಿರುದ್ಧ ಸರ್ಕಾರ ಏನು ಕ್ರಮ ಜರುಗಿಸುತ್ತೋ ಕಾದು ನೋಡಬೇಕಿದೆ...
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ...
Kshetra Samachara
01/10/2022 06:45 pm