ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಲವು ಕಾಮಗಾರಿಗೆ ಚಾಲನೆ ಹಾಗೂ ಉದ್ಘಾಟನೆ

ನವಲಗುಂದ : ಕರ್ನಾಟಕ ನೀರಾವರಿ ನಿಗಮ ನಿಯಮಿತದ ವತಿಯಿಂದ ನವಲಗುಂದದ ಶಾನವಾಡ-ಯಮನೂರ, ಶಾನವಾಡ-ತಿರ್ಲಾಪುರ, ಹಾಲಕುಸಗಲ್ಲ-ಜಾವೂರ, ಹಾಲಕುಸಗಲ್ಲ-ಹೆಬ್ಬಾಳ, ಕುಸುಗಲ್ಲ- 15ನೇ ಬ್ಲಾಕ್ ಮತ್ತು ಮೊರಬ ದಂಡಿನದಾರಿ ಅಚ್ಚುಕಟ್ಟು ರಸ್ತೆಗಳ ಸುಧಾರಣೆ ಕಾಮಗಾರಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಾಲಕುಸಗಲ್ಲ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಹಾಗೂ ಹಾಲು ಉತ್ಪಾದಕರ ಸಂಘದ ಕಟ್ಟಡದ ಉದ್ಘಾಟನೆ ನಡೆಸಲಾಯಿತು. ನವಲಗುಂದ ಮತಕ್ಷೇತ್ರದ ಹಾಲಕುಸಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಲಿಂಗಬಸವೇಶ್ವರ ಸಮುದಾಯ ಭವನ ಕಟ್ಟಡದ ಉದ್ಘಾಟನೆ ನಡೆಸಲಾಯಿತು.

ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಶರಣಪ್ಪ ದಾನಪ್ಪಗೌಡರ್ ಹಾಗೂ ಅಧ್ಯಕ್ಷರಾದ ಶಂಕರ್ ಮುಗದ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

28/09/2022 09:57 am

Cinque Terre

9.08 K

Cinque Terre

0

ಸಂಬಂಧಿತ ಸುದ್ದಿ