ಧಾರವಾಡ: ವಾರ್ಡ್ ನಂಬರ್ 22ರಲ್ಲಿ ಬರುವ ಜನ್ನತ್‌ನಗರ, ಚುರುಮುರಿ ಬಟ್ಟಿ ಏರಿಯಾಗಳಲ್ಲಿ ಸಮಸ್ಯೆಗಳ ಕಣಜವೇ ಇದ್ದು, ಇಲ್ಲಿನ ಜನ ಸಮಸ್ಯೆಗಳ ವಿರುದ್ಧ ಸಮರ ಸಾರಿದ್ದಾರೆ. ಆದರೆ, ಈ ಸಮರದಲ್ಲಿ ಸಮಸ್ಯೆಗಳೇ ಗೆದ್ದು ಬೀಗುತ್ತಿವೆ.
ಈ ವಾರ್ಡಿನ ಅರಸನಾದ ಆಸ್ಗರ್‌ಅಲಿ ಮುಲ್ಲಾ, ವಾರ್ಡಿನ ಜನರಿಂದ ನಡೆಯುತ್ತಿರುವ ಸಮಸ್ಯೆಗಳ ಸಮರಕ್ಕೆ ಕೈ ಜೋಡಿಸದೇ ಪಲಾಯನವಾದ ಮಾಡುತ್ತಿದ್ದಾರಂತೆ. ಇದು ನಮ್ಮ ವಾದವಲ್ಲ. ಅಲ್ಲಿನ ಜನರ ಆರೋಪ. ನಿಮ್ಮ ಪಬ್ಲಿಕ್ ನೆಕ್ಸ್ಟ್ ಧಾರವಾಡದ ವಾರ್ಡ್ ನಂಬರ್ 22ರಲ್ಲಿ ಒಂದು ಸುತ್ತು ಹಾಕಿಕೊಂಡು ಬಂದಿದ್ದು, ಅಲ್ಲಿನ ಸಮಸ್ಯೆಗಳ ಬುತ್ತಿಯನ್ನೇ ಹೊತ್ತು ತಂದಿದೆ.
ಈ ವಾರ್ಡಿನ್ ಪಾಲಿಕೆ ಸದಸ್ಯ ಆಸ್ಗರ್‌ಅಲಿ ಮುಲ್ಲಾ ಈ ವಾರ್ಡಿಗೆ ಬಂದಿದ್ದು, ಚುನಾವಣೆ ಸಂದರ್ಭದಲ್ಲಿ ಮಾತ್ರವಂತೆ. ಅದಾದ ಮೇಲೆ ಬಂದೇ ಇಲ್ಲ ಎಂಬುದು ಈ ಜನರ ಆರೋಪ. ಈ ಸಂಬಂಧ ನಿಮ್ಮ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯನ್ನು ಶೀಘ್ರ ಪ್ರಸಾರ ಮಾಡಲಿದೆ.
Kshetra Samachara
23/09/2022 03:34 pm