ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜೇನು ನೊಣಗಳ ಕಾಟ; ಭಯದಿಂದ ದೂರುಳಿದ ಗ್ರಾ.ಪಂ ಸಿಬ್ಬಂದಿ

ಕುಂದಗೋಳ : ಇಲ್ಲೋಂದು ಗ್ರಾಮ ಪಂಚಾಯಿತಿಗೆ ಜನಸಾಮಾನ್ಯರು, ಅಧಿಕಾರಿಗಳು ಅಷ್ಟೇ ಯಾಕೆ ? ಸದ್ಯದ ಪರಿಸ್ಥಿತಿಯಲ್ಲಿ ಯಾರೇ ಬರಬೇಕಾದ್ರೂ ನೊಣದ ಭಯ ಹೆಚ್ಚಾಗಿದೆ.

ಅದು ಕೇವಲ ಒಂದು ನೊಣದಿಂದ ಸಂಪೂರ್ಣ ನಾಲ್ಕು ಗ್ರಾಮ ಪಂಚಾಯಿ ಹಳ್ಳಿಗರು, ಇದೀಗ ತಮ್ಮ ಕಛೇರಿ ಕೆಲಸಕ್ಕೆ ಗ್ರಾಮ ಪಂಚಾಯಿತಿಗೆ ಬರಲು ಹಿಂದೇಟು ಹಾಕ್ತಾ ಇದ್ದಾರೆ, ಅರೆ ಕೇವಲ ಪಂಚಾಯ್ತಿ ಅಷ್ಟೇ ಅಲ್ಲಾ ರೀ ಶಾಲೆ ಮಕ್ಕಳು ಶಾಲೆಗೆ ಹೋಗಲು ಬರಲು ನೊಣದ ಭಯ ಕಾಡ್ತಾ ಇದೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಹಾಗೂ ಶಾಲೆಯ ಕಟ್ಟಡದ ಮೇಲೆ ತೊಗರು ಜೇನು ನೊಣಗಳು ಕಳೆದ ಹಲವಾರು ದಿನಗಳಿಂದ ಬೀಡು ಬಿಟ್ಟಿದ್ದು, ಈ ಜೇನು ನೊಣಗಳನ್ನು ಬೆರೇಡೆ ಓಡಿಸುವುದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು ಮರೆತು ತಮ್ಮ ಕೆಲಸದಲ್ಲೇ ಮಗ್ನರಾಗಿದ್ದಾರೆ.

ಈ ಕಾರಣ ಜನಸಾಮಾನ್ಯರು ಯಾವುದೇ ಕೆಲಸಕ್ಕೆ ಹೋಗಲು ಭಯ ಕಾಡ್ತಾ ಇದ್ದು, ಅಧಿಕಾರಿಗಳು ಸಿಬ್ಬಂದಿಗಳು ಅಂಗೈಯಲ್ಲಿ ಜೀವ ಹಿಡಿದು ಅನಿವಾರ್ಯವಾಗಿ ಕೆಲಸ ಕೈಗೊಂಡಿದ್ದಾರೆ‌.

ಒಟ್ಟಾರೆ ಮಕ್ಕಳಿಗೆ ಹಾಗೂ ಗ್ರಾಮ ಪಂಚಾಯಿತಿ ಬರುವ ಅಧಿಕಾರಿ ಜನಸಾಮಾನ್ಯರಿಗೆ ಜೇನು ನೊಣಗಳು ಕಚ್ಚಿ ಅಪಾಯ ಸೃಷ್ಟಿಸುವ ಮುಂಚೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಜೇನು ನೊಣ ಓಡಿಸಲು ಉಪಾಯ ಹುಡುಕಬೇಕಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By :
Kshetra Samachara

Kshetra Samachara

13/09/2022 02:21 pm

Cinque Terre

16.88 K

Cinque Terre

0

ಸಂಬಂಧಿತ ಸುದ್ದಿ