ಕುಂದಗೋಳ : ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದೀರೋ ? ನೀವೂ ಇರುವುದಾದರೇ ಕುಂದಗೋಳ ತಾಲೂಕಿನ ಕಡಪಟ್ಟಿಗೆ ಸಂಪರ್ಕ ಕಲ್ಪಿಸುವ ಕಣೋಜ ಹಳ್ಳದ ಪರಿಸ್ಥಿತಿ ನೋಡಿದ್ದೀರಾ ?
ಎಸ್.! ಈ ಪ್ರಶ್ನೇ ಕೇಳುತ್ತಿರುವುದು ಕಡಪಟ್ಟಿ ಅಲ್ಲಾಪೂರ ಗ್ರಾಮಸ್ಥರು ಕುಂದಗೋಳ ಪಟ್ಟಣದಿಂದ ಕೇವಲ ಆರು ಕಿಲೋಮೀಟರ್ ದೂರದ ಊರಿಗೆ ಹೋಗಲು ಜನ, ವೃದ್ಧರು, ಮಹಿಳೆಯರು ಅಷ್ಟೇ ಯಾಕೆ ಈ ಗ್ರಾಮಲೆಕ್ಕಾಧಿಕಾರಿ, ಪೊಲೀಸರು, ಅಧಿಕಾರಿ ವರ್ಗದವರು ಯಮಯಾತನೆ ಪಡಬೇಕು.
ಅಷ್ಟರಮಟ್ಟಿಗೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜೊತೆ ಇದೀಗ ಕಣೋಜ ಹಳ್ಳದ ಮೇಲ್ಸೇತುವೆ ದಾರಿ ಕೊಚ್ಚಿ ಹಳ್ಳ ಸೇರಿದೆ. ಪ್ರತಿ ವರ್ಷ ಮಳೆಗಾಲ ಏರ್ಪಾಟ್ಟಾಗ ಉಂಟಾಗುವ ಈ ಸಮಸ್ಯೆಗೆ ಇಂದಿಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಕೈಗೊಳ್ಳದೆ ಮೂಕರಾಗಿದ್ದು ಜನಪ್ರತಿನಿಧಿಗಳು ಕಡಿಮೆ ಮತ ಇರುವ ಹಳ್ಳಿ ಎಂದು ಕಡೆಗಣಿಸಿದ್ದಾರಾ ? ಎಂದು ಜನ ಪ್ರಶ್ನೆ ಮಾಡ್ತಾ ಇದ್ದಾರೆ.
ನಿತ್ಯ ಸರ್ಕಾರಿ ಕಛೇರಿ ಕೆಲಸ, ಆಸ್ಪತ್ರೆ, ಸಂತೆ ಪ್ಯಾಟಿಗೆ ಓಡಾಟ ಮಾಡುವ ಜನರಿಗೆ ಸಮಸ್ಯೆ ಆಗಿದ್ದು, ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಕಣೋಜ ಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಮಾಡದಿದ್ದರೇ ಜನ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
07/09/2022 06:39 pm