ಕುಂದಗೋಳ: ತಾಲೂಕಿನ ಎಲ್ಲೆಡೆ ಸುರಿದ ಭಾರಿ ಮಳೆ ಕಾರಣ ಮನೆ ಮೇಲ್ಛಾವಣಿ ಗೋಡೆ ಕುಸಿದು ಬಿದ್ದಿದ್ದು ಗರ್ಭಿಣಿ ಮಹಿಳೆ ಹಾಗೂ ವ್ಯಕ್ತಿಯೋರ್ವ ಪಾರಾದ ಎರೆಡು ಘಟನೆಗಳು ಸಂಭವಿಸಿವೆ.
ಹೌದು ! ಸಂಶಿ ಗ್ರಾಮದಲ್ಲಿ ಮಳೆಯ ರಭಸಕ್ಕೆ ಮಹಾದೇವಿ ಶೇಖಪ್ಪ ಕ್ಯಾಲಕೊಂಡ ಇವರ ಮನೆ ಸಂಪೂರ್ಣ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಗರ್ಭಿಣಿ ಮಹಿಳೆಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಇನ್ನೂ ದೇವನೂರು ಗ್ರಾಮದಲ್ಲಿ ಸಪೂರಾಂಬಿ ಆರೀಫ್‌ಸಾಬ್ ಖತೀಬ್ ಎಂಬುವವರ ಮನೆ ಗೋಡೆ ಬಿದ್ದಿದ್ದು ಮನೆಯಲ್ಲಿ ವ್ಯಕ್ತಿ ಭುಜಕ್ಕೆ ಪೆಟ್ಟಾಗಿದ್ದು ತಕ್ಷಣ ಕುಂದಗೋಳ ತಾಲೂಕ ಆಸ್ಪತ್ರೆಗೆ ರವಾನಿಸಿ ಸ್ಕ್ಯಾನಿಂಗ್ ಮಾಡಿಸಿ ಔಷಧೋಪಚಾರ ಮಾಡಲಾಗಿದೆ.
Kshetra Samachara
30/08/2022 10:27 pm