ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಲೋಕೋಪಯೋಗಿ ಇಲಾಖೆ ಮುಂದೆ ಅವಾಂತರ- ಮಳೆ ನೀರಿಗಿಲ್ಲ ದಾರಿ.!

ಕುಂದಗೋಳ: ಪಟ್ಟಣದ ಲೋಕೋಪಯೋಗಿ ಇಲಾಖೆ ಅಧೀನದ ಪರಿವೀಕ್ಷಣಾ ಮಂದಿರಕ್ಕೆ ಅತಿಥಿಗಳು ಬಂದರೆ ಹುಷಾರ್..

ಹೌದು. ದೀಪದ ಬುಡದಲ್ಲೇ ಕತ್ತಲು ಎಂಬಂತೆ ಲೋಕೋಪಯೋಗಿ ಇಲಾಖೆ ತನ್ನ ವ್ಯಾಪ್ತಿಯ ಪರಿವೀಕ್ಷಣಾ ಮಂದಿರದ ನಿರ್ವಹಣೆ ಮರೆತಿದ್ದು, ಭಾರಿ ಮಳೆಯ ಕಾರಣ ಅತಿಥಿ ಗೃಹಕ್ಕೆ ಕಾಲಿಡದಂತೆ ಆವರಣ ಸಂಪೂರ್ಣ ಕಲುಷಿತ ರಾಡಿ ನೀರಿನಿಂದ ಜಲಾವೃತವಾಗಿದೆ.

ಈ ಪರಿಣಾಮ ಪರಿವೀಕ್ಷಣಾ ಮಂದಿರದ ಒಳಗೆ ಜನ ಹೋಗುವ ಹಾಗಿಲ್ಲ. ಇನ್ನೂ ವಾಹನಗಳು ಹರಸಾಹಸ ಪಟ್ಟು ಪರಿವೀಕ್ಷಣಾ ಮಂದಿರ ಸೇರಬೇಕು. ವಿಪರ್ಯಾಸ ಏನೆಂದರೆ ಪಕ್ಕದಲ್ಲೇ ಇರುವ ಲೋಕೋಪಯೋಗಿ ಇಲಾಖೆಗೆ ಹೋಗಲು ಸ್ವತಃ ಅಧಿಕಾರಿಗಳೇ ಈ ನೀರಿನಲ್ಲಿ ಸರ್ಕಸ್ ಮಾಡಿ ಇಲಾಖೆಗೆ ಕಾಲಿಡಬೇಕು.

ಕಳೆದ ಹಲವಾರು ವರ್ಷಗಳಿಂದ ಈ ದುಸ್ಥಿತಿ ಕಂಡರೂ ಲೋಕೋಪಯೋಗಿ ಇಲಾಖೆ, ಜನಪ್ರತಿನಿಧಿಗಳು ಮಾತ್ರ ಗಪ್ ಚುಪ್ ಆಗಿದ್ದು, ಮಳೆಗಾಲದಲ್ಲಿ ಏನಾದ್ರೂ ಅತಿಥಿ ಗೃಹ ಸಿಗುತ್ತೇ ಅಂತ ಸಾರ್ವಜನಿಕರು ಜನಪ್ರತಿನಿಧಿಗಳು ಬಂದ್ರೇ ನಿಮ್ಮ ಕಥೆ ಹರೋಹರ ಬಿಡಿ‌.

Edited By :
Kshetra Samachara

Kshetra Samachara

30/08/2022 04:01 pm

Cinque Terre

31.56 K

Cinque Terre

0

ಸಂಬಂಧಿತ ಸುದ್ದಿ