ನವಲಗುಂದ : ನವಲಗುಂದ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯ ಆವರಣದ ಇದು, ಮೊದಲಿದ್ದದ್ದಕ್ಕಿಂತ ಅಭಿವೃದ್ಧಿ ಕೆಲಸಗಳು ಆಗ್ತಿವೆ. ಇದರೊಂದಿಗೆ ಕಾರ್ಯಾಲಯದಲ್ಲಿ ಅಚ್ಚುಕಟ್ಟಾದ ಶೌಚಾಲಯದ ವ್ಯವಸ್ಥೆ ಕೂಡ ಇದೆ. ಆದರೆ ಕೆಲವು ಸಾರ್ವಜನಿಕರಿಂದ ಆವರಣದಲ್ಲೆ ಬಯಲು ಮೂತ್ರ ಮಾಡಲಾಗುತ್ತಿರೋದು ಕಾರ್ಯಾಲಯಕ್ಕೆ ಶೋಭೆ ತರುವಂತದ್ದಲ್ಲಾ ಎಂಬುದು ಹಲವರ ಅಭಿಪ್ರಾಯ.
ತಾಲೂಕಾ ದಂಡಾಧಿಕಾರಿಗಳಾದ ಅನೀಲ ಬಡಿಗೇರ ದಕ್ಷ ಪ್ರಾಮಾಣಿಕ ಅಧಿಕಾರಿ, ಅವರ ಆಗಮನದ ನಂತರ ನವಲಗುಂದದಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಆವರಣದ ಸ್ವಚ್ಛತೆ ಬಗ್ಗೆ ಅವರು ಗಂಭೀರವಾಗಿ ಗಮನ ಹರಿಸಬೇಕಾಗಿದೆ.
ಆವರಣದಲ್ಲಿ ಬಯಲು ಮೂತ್ರ ಮಾಡುವುದು, ಆವರಣದ ಅಸ್ವಚ್ಛತೆ, ಕಾಪೌಂಡ್‌ಗೆ ಒರಗಿದ ಜಾಹೀರಾತಿನ ಬೃಹತ್ ಫಲಕ, ಪಾರ್ಕಿಂಗ್ ವ್ಯವಸ್ಥೆ ಇದ್ರೂ ಸಹ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ. ಈ ರೀತಿಯಾಗಿ ಹಲವು ನಿರ್ವಹಣೆ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಅನೀಲ ಬಡಿಗೇರ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಇದ್ದಂತ ಕೆಲವು ಸಮಸ್ಯೆಗಳನ್ನು ಬಗೆ ಹರಿಸಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
26/08/2022 08:42 pm