ಕುಂದಗೋಳ : ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಜಾರಿಗೆ ತಂದ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಹತ್ವ ಕಳೆದುಕೊಳ್ಳುತ್ತಿದ್ದು ಈಗಾಗಲೇ ವಾಸ್ತವ್ಯ ನಡೆದ ಹಳ್ಳಿಗಳ ಅಭಿವೃದ್ಧಿ ಠುಸ್ ಆಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಕುಂದಗೋಳ ತಾಲೂಕಿನ ಮೊಟ್ಟ ಮೊದಲ ಗ್ರಾಮ ವಾಸ್ತವ್ಯ ಅಂದಿನ ತಹಶೀಲ್ದಾರರ ಬಸವರಾಜ ಮೆಳವಂಕಿ ನೇತೃತ್ವದಲ್ಲಿ ಗುಡೇನಕಟ್ಟಿ ಗ್ರಾಮದಲ್ಲಿ ಅತಿ ಅದ್ದೂರಿಯಾಗಿ ನಡೆದಿತ್ತು, ಅಧಿಕಾರಿಗಳಿಗೆ ಜನ ಅಭಿವೃದ್ಧಿ ವಿಚಾರಕ್ಕಾಗಿ ಸಾಲು ಸಾಲು ಮನವಿ ಸಹ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಆಗಿಲ್ಲವಂತೆ.
ಮುಖ್ಯವಾಗಿ ಗ್ರಾಮಗಳ ಜಮೀನು ಪೋಡಿ, ಸ್ಮಶಾನಕ್ಕೆ ಜಾಗ, ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಚರಂಡಿ ಅಭಿವೃದ್ಧಿ, ಬೆಳೆ ಪರಿಹಾರ ಜೊತೆ ಅತಿವೃಷ್ಟಿಗೆ ಮನೆ ಬಿದ್ದವರಿಗೆ ಗ್ರಾಮ ವಾಸ್ತವ್ಯ ನಡೆದು ವರ್ಷ ಕಳೆಯುತ್ತಾ ಬಂದ್ರೂ ಪರಿಹಾರ ಸಿಕ್ಕಿಲ್ಲವಂತೆ.
ಸದ್ಯದ ಪರಿಸ್ಥಿತಿಯಲ್ಲಿ ಗುಡೇನಕಟ್ಟಿ ಕುಗ್ರಾಮವಾಗಿದ್ದು, ಎಲ್ಲಿ ನೋಡಿದ್ರೂ ರಾಶಿ ರಾಶಿ ಕಸ, ಚರಂಡಿ ಅನೈರ್ಮಲ್ಯ, ಕರೆ ಸುತ್ತ ಕಸ, ರಸ್ತೆ ಮೇಲೆ ರಾಡಿ ಪಾಚಿ ತುಂಬಿದೆ. ಅಂಗನವಾಡಿ ಕಟ್ಟಡ ಮಳೆ ಆದ್ರೇ ನೀರಲ್ಲಿ ನಿಲ್ಲುತ್ತದೆ. ಜನರ ಜಮೀನು, ಖಾತೆ, ನೋಡಿ ಸಮಸ್ಯೆ ಬಗೆಹರಿದಿಲ್ಲಾ.
ಒಟ್ಟಾರೆ ತಹಶೀಲ್ದಾರರ ಗ್ರಾಮ ವಾಸ್ತವ್ಯ ಪ್ರತಿ ಮೂರನೇ ಶನಿವಾರ ಪಿಕ್ ನಿಕ್ ಆಗ್ತಾ ಇದೆ ಎಂದು ಜನರೇ ಆರೋಪ ಮಾಡ್ತಾ ಇದ್ದು ಸದ್ಯ ಹಾಲಿ ತಹಶೀಲ್ದಾರರ ಅಶೋಕ್ ಶಿಗ್ಗಾಂವಿ ನೇತೃತ್ವದಲ್ಲಿ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರೆದಿದ್ದು ಅವುಗಳ ಸಂಪೂರ್ಣ ವರದಿ ಮುಂದಿನ ಭಾಗದಲ್ಲಿ ಬರಲಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
29/07/2022 06:50 pm