ಹುಬ್ಬಳ್ಳಿ: ವಾಹನ ಚಾಲಕರು, ಪ್ರಯಾಣಿಕರ ಗಮನಕ್ಕೆ. ಸೇತುವೆ ಕಾಮಗಾರಿ ಹಿನ್ನಲೆಯಲ್ಲಿ ನಾಳೆ (ಜುಲೈ 29ರ) ಬೆಳಗ್ಗೆಯಿಂದ ಹೊಸೂರು ಸರ್ಕಲ್‌ದಿಂದ ಗೋಕುಲ ರೋಡ್‌ಗೆ ಹೋಗುವ ವಾಹನಗಳ ಸಂಚಾರ ಮಾರ್ಗ ಬಂದ್ ಆಗಲಿದೆ. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಕಟನೆ ಹೊರಡಿಸಿದೆ.
ಪ್ರಕಟನೆಯಲ್ಲಿ ಏನಿದೆ?:
ನಗರದ ಹೊಸೂರು, ವಾಣಿವಿಲಾಸ್ ಹನಮಂತದೇವರ ಗುಡಿ ಮುಂದಿನ ಸರ್ಕಲ್ ಮಧ್ಯದಲ್ಲಿ ಮೇಲು ಸೇತುವೆ ಕಾಮಗಾರಿ ಪ್ರಾರಂಭವಾಗುತ್ತಿವುದರಿಂದ ನಾಳೆ (ಜುಲೈ 29ರ) ಬೆಳಗ್ಗೆಯಿಂದ ಹೊಸೂರು ಸರ್ಕಲ್‌ದಿಂದ ಗೋಕುಲ ರೋಡ್‌ಗೆ ಹೋಗುವ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದು, ಸಾರ್ವಜನಿಕರು ಈ ಮಾರ್ಗಗಳ ಮುಖಾಂತರ ಸಂಚರಿಸಲು ಈ ಮೂಲಕ ಕೋರಲಾಗಿದೆ.
ಹೊಸೂರ ಸರ್ಕಲ್‌ನಿಂದ ಗೋಕುಲ ರೋಡ್‌ಗೆ ಹೋಗುವ ಸಂಚಾರವನ್ನು ನಿಷೇಧಿಸಲಾಗಿದೆ. ಕಾರಣ ಹೊಸುರ ಸರ್ಕಲ್‌ನಿಂದ ಎಡಕ್ಕೆ ತಿರುಗಿ ಜೋಶಿ ಆಸ್ಪತ್ರೆ ಮುಂದೆ ಹಾಯ್ದು ಗೋಕುಲ ರೋಡ್ ಕಡೆಗೆ ಹೋಗುವವರು ಲಕ್ಷ್ಮಿ ವೇ ಬ್ರಿಡ್ಜ್, ಗ್ಲಾಸ್ ಹೌಸ್, ಗಿರಣಿ ಚಾಳ, ಎಂ.ಟಿ. ಮಿಲ್ಲ ಸರ್ಕಲ್, ವಾಣಿ ವಿಲಾಸ ಸರ್ಕಲ್‌ದಲ್ಲಿ ಎಡತಿರುವು ಪಡೆದುಕೊಂಡು ಗೋಕುಲ ರೋಡ್ ಕಡೆಗೆ ಹೋಗುವುದು.
Kshetra Samachara
28/07/2022 09:52 pm