ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಮಳೆಗಾಲದ ಸಂದರ್ಭದಲ್ಲಿ ತಲೆದೂರುವ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಲು, ಮಹಾನಗರ ಪಾಲಿಕೆ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಕೀಟಗಳ ನಾಶಕ್ಕೆ ಗಪ್ಪಿ ಮೀನುಗಳ ಬಳಕೆಗೆ ಮುಂದಾಗಿದೆ.
ಹೌದು ನಿರಂತರ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಈ ಮೀನುಗಳನ್ನು ಬಿಡಲಾಗುತ್ತಿದ್ದು, ಮಹಾನಗರ ಪಾಲಿಕೆಗಳ ಪೈಕಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ.
ಇನ್ನು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಡೆಂಗ್ಯೂ, ಮಲೇರಿಯಾ, ಚಿಕನಗುನ್ಯ ಸೇರಿದಂತೆ ಕೆಲ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಅಲ್ಲಲ್ಲಿ ನಿರ್ಮಾಣವಾಗಿರುವ ತಗ್ಗು ಪ್ರದೇಶಗಳು, ಅಲ್ಲಲ್ಲಿ ನೀರು ಹರಿಯದೆ ನಿಂತಿರುವ ನಾಲಾಗಳು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿವೆ.
ಇಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ, ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಪ್ರಮುಖವಾಗಿ ನಗರದ ಉಣಕಲ್ಲ, ನಾಗಶೆಟ್ಟಿಕೊಪ್ಪ, ಸಂತೋಷನಗರ ಕರೆ ಸೇರಿದಂತೆ 21 ಕೆರೆ ಹಾಗೂ ಬೃಹದಾಕಾರ ಸೇರಿದಂತೆ 70 ಸಣ್ಣಪುಟ್ಟ ನಾಲಾಗಳಲ್ಲಿಯೂ ಕೂಡ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ.
ಒಂದು ಕೆರೆಗೆ 5 ಸಾವಿರ ಮೀನುಗಳಂತೆ ಬಿಡಲಾಗುತ್ತಿದ್ದು, ಆರೋಗ್ಯ ಇಲಾಖೆ ಈ ಗಪ್ಪಿ ಮೀನುಗಳನ್ನು ಮಹಾನಗರ ಪಾಲಿಕೆಗೆ ನೀಡಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಪ್ರಯೋಗಕ್ಕೆ ಪಾಲಿಕೆಯ ಆರೋಗ್ಯ ಇಲಾಖೆ ಮುಂದಾಗಿದೆ.
ಈ ಮೀನುಗಳನ್ನು ಬಳಸುತ್ತಿರುವುದರಿಂದ ಪರಿಸರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ನೀರಿನ ಮೇಲ್ಪದರಿನಲ್ಲಿ ಉತ್ಪತ್ತಿಯಾಗುವ ಲಾರ್ವಾವನ್ನು ತಿಂದು ಜೀವಿಸುತ್ತವೆ. ಇಂತಹ ನೀರಿನಲ್ಲಿ ಮಲೇರಿಯಾ ಹರಡಿಸುವಂತಹ ಲಾರ್ವಾಗಳು ನಾಶ ಮಾಡಿ ರೋಗ ಹರಡದಂತೆ ತಡೆಯುತ್ತದೆ. ಸದ್ಯ ಪಾಲಿಕೆ ವೈದ್ಯಧಿಕಾರಿಗಳ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
25/07/2022 01:12 pm