ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳಕ್ಕೆ ಬಂತು ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ !

ಕುಂದಗೋಳ: ಕೇಂದ್ರ ಪುರಸ್ಕೃತ ಯೋಜನೆಯಡಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಕುಂದಗೋಳ ತಾಲೂಕಿನ ಪಶು ವೈದ್ಯಾಧಿಕಾರಿಗಳ ಆಸ್ಪತ್ರೆಗೆ ಆಗಮಿಸಿದ ಸಂಚಾರಿ ತುರ್ತು ಚಿಕಿತ್ಸಾ ವಾಹನಕ್ಕೆ ಪೂಜೆ ಮಾಡಿ ಸ್ವಾಗತಿಸಲಾಯಿತು.

ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ಹಾಗೂ ಪಶು ವೈದ್ಯಾಧಿಕಾರಿ ಡಾ.ಬಿ.ಬಿ.ಅವಾರಿಯವರು ಆಸ್ಪತ್ರೆ ಸರ್ವ ಸಿಬ್ಬಂದಿಗಳು ನೇತೃತ್ವದಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ವಾಹನವನ್ನು ಸಂಪೂರ್ಣ ಪರಿಶೀಲನೆ ನಡೆಸಿ, ಕಳೆದ ಹಲವಾರು ವರ್ಷಗಳಿಂದ ವೈದ್ಯರು ಸಿಬ್ಬಂದಿ ಕೊರತೆಯಿಂದ ಹಳ್ಳಿಗರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ದೂರವಾಗಿತ್ತು. ಇದೀಗ ಈ ವಾಹನ ಸಮರ್ಪಕ ಸೇವೆ ನೀಡಲು ನಮಗೆ ಒದಗಿದೆ ಎಂದರು.

ಪಶು ವೈದ್ಯಾಧಿಕಾರಿ ಡಾ.ಬಿ.ಬಿ.ಅವಾರಿ ಈ ವಾಹನಕ್ಕೆ ಒಬ್ಬ ವೈದ್ಯರು, ಟೆಕ್ನಿಕಲ್ ಸಿಬ್ಬಂದಿ ಹಾಗೂ ವಾಹನ ಚಾಲಕರು ಅಗತ್ಯವಿದ್ದು ಶೀಘ್ರದಲ್ಲೇ ವಾಹನ ಸೇವೆ ನೀಡಲಿದೆ ಎಂದರು.

Edited By : Manjunath H D
Kshetra Samachara

Kshetra Samachara

20/07/2022 07:29 pm

Cinque Terre

16.69 K

Cinque Terre

1

ಸಂಬಂಧಿತ ಸುದ್ದಿ