ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ರಸ್ತೆಯಿಲ್ಲದೆ ಸ್ಥಳೀಯರ ಪರದಾಟ, ನಿವಾಸಿಗಳ ಗೋಳು ಕೇಳೋರು ಯಾರು?

ನವಲಗುಂದ : ಮಳೆಗಾಲ ಅಂದ್ರೆ ಕೆಲವರಿಗೆ ಪ್ರವಾಸಕ್ಕೆ ಹೋಗುವ ಸಮಯ. ಆದರೆ, ಎಷ್ಟೋ ಜನರಿಗೆ ಬದುಕು ಸಾಗಿಸಲು ಪರದಾಡುವ ಸಮಯವಾಗಿರುತ್ತೆ. ಅದು ಈಗ ನವಲಗುಂದ ಪಟ್ಟಣದ ಬಸವೇಶ್ವರ ಪ್ಲಾಟ್‌ನ 23ನೇ ವಾರ್ಡ್‌ನ ನಿವಾಸಿಗಳ ಗೋಳು ಎಂದರೂ ತಪ್ಪಾಗೋದಿಲ್ಲ.

ಸಂಚಾರಕ್ಕೆ ರಸ್ತೆ ಇಲ್ಲ. ನೀರು ಹರಿದು ಹೋಗಲು ಚರಂಡಿ ಹೂಳೆತ್ತಿಲ್ಲ, ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲದೆ ನಿವಾಸಿಗಳು ಬೇಸತ್ತು ಹೋಗಿದ್ದಾರಂತೆ. ದೃಶ್ಯಗಳಲ್ಲಿ ಕಾಣುವ ದುಸ್ಥಿತಿಯಲ್ಲೇ ದಿನನಿತ್ಯ ಸಾರ್ವಜನಿಕರು ಬದುಕು ನಡೆಸುವಂತಾಗಿದೆ. ಈ ಬಗ್ಗೆ ನಿವಾಸಿಗಳು ಏನು ಹೇಳ್ತಾರೆ ನೀವೇ ಕೇಳಿ.

ಸಂಪೂರ್ಣ 23 ನೇ ವಾರ್ಡ್‌ನಲ್ಲಿ ಇದೇ ರೀತಿ ರಸ್ತೆ ಇದೆ. ಕೆಸರು ಗದ್ದೆಯಂತಾದ ರಸ್ತೆಯಲ್ಲಿಯೇ ಕಳೆದ ಮೂವತ್ತು ವರ್ಷಗಳಿಂದ ಮಹಿಳೆಯರು, ಮಕ್ಕಳು, ವಿಕಲಚೇತನರು, ವೃದ್ಧರು ಪ್ರತಿ ದಿನ ಜೀವನ ನಡೆಸುವಂತಾಗಿದೆ.

23 ನೇ ವಾರ್ಡ್ ನ ಪುರಸಭೆ ಸದಸ್ಯರು ಇತ್ತ ಗಮನ ಹರಿಸಬೇಕಿದೆ. ಅದರೊಂದಿಗೆ ಅಧಿಕಾರಿಗಳು ಸ್ಪಂದಿಸಿ, ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By :
Kshetra Samachara

Kshetra Samachara

15/07/2022 02:21 pm

Cinque Terre

36.24 K

Cinque Terre

1

ಸಂಬಂಧಿತ ಸುದ್ದಿ