ಕಲಘಟಗಿ: ಕಲಘಟಗಿ ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯು ಕಸದ ರಾಶಿ, ಕೆಸರಿನಿಂದ ಗಬ್ಬೆದ್ದು ಹೋಗಿದೆ. ಇಲ್ಲಿ ದಿನನಿತ್ಯ ರಸ ಗೊಬ್ಬರಕ್ಕಾಗಿ ರೈತರು ಬರುತ್ತಾರೆ. ಅದೇ ರೀತಿ ಇಲ್ಲಿ ಮಂಗಳವಾರದಂದು ದನಕರುಗಳ ವ್ಯಾಪಾರ ಕೂಡ ನಡೆಯುತ್ತೆ.
ಇಷ್ಟೆಲ್ಲ ನಡೆಯುವ ಇಲ್ಲಿ ಸ್ವಚ್ಚತೆ ಮಾತ್ರ ಇಲ್ಲದಂತಾಗಿದೆ. ಇಲ್ಲಿ ಇರುವ ಗೋದಾಮುಗಳಿಂದ ಬಾಡಿಗೆ ಪಡೆಯುತ್ತಾರೆ. ಅದೇ ರೀತಿ ಸಂತೆಯ ದಿನದಂದು ವ್ಯಾಪಾರಸ್ಥರಿಂದ ದುಡ್ಡು ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲ ದುಡ್ಡು ಪಡೆಯುತ್ತಿದ್ರೂ ಸ್ವಚ್ಛತೆಗೆ ಮಾತ್ರ ದುಡ್ಡಿಲ್ಲ ಅಂತ ಇಲ್ಲಿಯ ಸಿಬ್ಬಂದಿ ಹೇಳುತ್ತಿದ್ದಾರೆ. ಕೂಡಲೇ ಇಲ್ಲಿಯ ಅವ್ಯವಸ್ಥೆಯನ್ನು ಅಧಿಕಾರಿಗಳು ಸರಿಪಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ
Kshetra Samachara
13/07/2022 09:45 pm