ಹುಬ್ಬಳ್ಳಿ: ಬೆಳಗಾವಿ-ಪಂಢರಪುರ-ಬೆಳಗಾವಿ ಹಾಗೂ ಎಸ್‌ಎಸ್‌ಎಸ್ ಹುಬ್ಬಳ್ಳಿ- ಪಂಢರಪುರ- ಎಸ್‌ಎಸ್‌ಎಸ್ ಹುಬ್ಬಳ್ಳಿ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿದೆ.
ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಜು. 9ರಂದು ಬೆಳಗ್ಗೆ 7 ಗಂಟೆಗೆ ಹೊರಡುವ ರೈಲು, ಅದೇ ದಿನ ಸಂಜೆ 4.30ಕ್ಕೆ ಪಂಢರಪುರ ನಿಲ್ದಾಣ ತಲುಪಲಿದೆ. 10ರಂದು ರಾತ್ರಿ 7.30ಕ್ಕೆ ಪಂಢರಪುರ ನಿಲ್ದಾಣದಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗ್ಗೆ 6.55ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುವುದು, ಮತ್ತೊಂದು ರೈಲು 9ರಂದು ರಾತ್ರಿ 7.30ಕ್ಕೆ ಪಂಢರಪುರದಿಂದ ಹೊರಟು, ಮಾರನೇ ದಿನ ಬೆಳಗಿನಜಾವ 3 ಗಂಟೆಗೆ ಬೆಳಗಾವಿಗೆ ತಲುಪುತ್ತದೆ. ಬೆಳಗಾವಿ ನಿಲ್ದಾಣದಿಂದ 10ರಂದು ಬೆಳಗ್ಗೆ 5.30ಕ್ಕೆ ಹೊರಡುವ ರೈಲು, ಅದೇ ದಿನ ಬೆಳಗ್ಗೆ 11.45ಕ್ಕೆ ಪಂಢರಪುರ ತಲುಪಲಿದೆ.
Kshetra Samachara
09/07/2022 11:27 am