ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಒಂದೆರಡು ವರ್ಷಗಳ ಹಿಂದೆಯಷ್ಟೇ ಕೋವಿಡ್ ಸಂದರ್ಭದಲ್ಲಿ ಕೂಡ ದಾಖಲೆಯ ತೆರಿಗೆ ಸಂಗ್ರಹಿಸುವ ಮೂಲಕ ಹೆಸರು ಮಾಡಿತ್ತು. ಆದರೆ, ಈಗ ಸಾರ್ವಜನಿಕರಿಂದ, ಉದ್ಯಮ ಘಟಕಗಳಿಂದ ಹಾಗೂ ಸರ್ಕಾರ ಕಚೇರಿಯಿಂದ ಸರಿಯಾದ ರೀತಿಯಲ್ಲಿ ತೆರಿಗೆ ಸಂಗ್ರಹವಾಗದೇ ಇರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ದಟ್ಟವಾಗಿ ಕಾಣುತ್ತಿವೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದ್ದ 100 ಕೋಟಿ ತೆರಿಗೆ ಹಣದಲ್ಲಿ ಕೇವಲ 40% ತೆರಿಗೆ ಸಂಗ್ರಹವಾಗಿದ್ದು, 60 ಕೋಟಿಗೂ ಅಧಿಕ ಟ್ಯಾಕ್ಸ್ ಹಣ ಸಂಗ್ರಹವಾಗಬೇಕಿದೆ. ಆದರೆ, ಸರ್ಕಾರದ ಹಂತದಲ್ಲಿಯೂ ಕೂಡ ಬಾಕಿ ಉಳಿಸಿಕೊಂಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟಾದಂತಾಗಿದೆ. ಈಗಾಗಲೇ ಸರ್ಕಾರದ ಗಮನಕ್ಕೆ ತಂದು ಪತ್ರ ಕೂಡ ಬರೆದಿದ್ದೇವೆ ಅಂತಾರೇ ಪಾಲಿಕೆ ಮಹಾಪೌರರು.
ಇನ್ನೂ ಎರಡು ವಾಣಿಜ್ಯ ಉದ್ಯಮಗಳು ಸುಮಾರು ವರ್ಷಗಳಿಂದ ಬಹುದೊಡ್ಡ ಮೊತ್ತದ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದರೂ ಕೂಡ ಪಾಲಿಕೆಗೆ ಸಮರ್ಪಕವಾಗಿ ತೆರಿಗೆ ಮಾತ್ರ ಸಂದಾಯ ಆಗ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ನಿರ್ದಾಕ್ಷಿಣ್ಯವಾಗಿ ತೆರಿಗೆ ವಸೂಲಿಗೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಾರ್ವಜನಿಕರ ಮೂಲಭೂತ ಸೌಕರ್ಯಗಳ ಸಮಸ್ಯೆ ನಿವಾರಣೆಗೆ ತೆರಿಗೆ ಪಾವತಿಯೇ ಮಾರ್ಗವಾಗಿದ್ದು, ಜನರು ತಮ್ಮ ಜವಾಬ್ದಾರಿ ನಿಭಾಯಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
08/07/2022 05:59 pm