ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅಣ್ಣಿಗೇರಿ ತಹಶೀಲ್ದಾರ ಕಚೇರಿಯ ಹಣ ದುರ್ಬಳಕೆ: ಕೇಸ್ ವರ್ಕರ್ ಅಮಾನತು

ಧಾರವಾಡ: ವಿಪತ್ತು ನಿರ್ವಹಣೆ ಹಾಗೂ ಸಂತ್ರಸ್ಥರ ಸಹಾಯಕ್ಕಾಗಿ ದಾನಿಗಳು ಕೊಟ್ಟ ದುಡ್ಡನ್ನು ಕಾನೂನು ಬಾಹಿರವಾಗಿ ದುರ್ಬಳಕೆ ಮಾಡಿಕೊಂಡ ಅಣ್ಣಿಗೇರಿ ಪಟ್ಟಣದ ತಹಶೀಲ್ದಾರ ಕಚೇರಿಯ ಕೇಸ್ ವರ್ಕರ್ ಮಂಜುನಾಥ ಮುಧೋಳ ಅವರನ್ನು ಅಮಾನತು ಮಾಡಿ ಅವರ ಮೇಲೆ ಇಲಾಖಾ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಮಂಜುನಾಥ ಅವರು ತಮ್ಮ ತಾಯಿ ಅಕೌಂಟ್ಗೆ 22 ಲಕ್ಷ 95 ಸಾವಿರ ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಇದು ತಹಶೀಲ್ದಾರ ವರದಿಯಿಂದ ಮೇಲ್ನೋಟಕ್ಕೆ ಗೊತ್ತಾಗಿದೆ. ವರದಿ ಆಧಾರದ ಮೇಲೆ ಮಂಜುನಾಥ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದರು.

ಅಲ್ಲದೇ ಮಂಜುನಾಥ ಅವರ ಮೇಲೆ ಇಲಾಖಾ ತನಿಖೆ ಕೂಡ ನಡೆಸುತ್ತಿದ್ದೇವೆ. ವರ್ಗಾವಣೆ ಮಾಡಿಕೊಂಡ ಹಣವನ್ನು ಮರಳಿ ಸರ್ಕಾರಿ ಖಾತೆಗೆ ವರ್ಗಾವಣೆ ಕೂಡ ಮಾಡಿಕೊಳ್ಳಲಾಗುತ್ತಿದೆ. ಪಿಡಿಡಿಯುಡಿಸಿಯವರು ಇದರ ತನಿಖಾಧಿಕಾರಿಯಾಗಿರುತ್ತಾರೆ. 3 ತಿಂಗಳ ಒಳಗಾಗಿ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 22 ಲಕ್ಷದಂತೆ ಎರಡು ಬಾರಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ತನಿಖೆ ವೇಳೆ ಇದು ಗೊತ್ತಾಗುತ್ತದೆ. 22 ಲಕ್ಷ ಅಥವಾ 2 ರೂಪಾಯಿ ಆದರೂ ಸರ್ಕಾರಿ ದುಡ್ಡನ್ನು ವರ್ಗಾವಣೆ ಮಾಡಿಕೊಳ್ಳವುದು ತಪ್ಪು. ಬೇರೆ ಯಾರಾದರೂ ಇದರಲ್ಲಿ ಶಾಮೀಲಾಗಿದ್ದರೆ ಅವರ ಮೇಲೂ ಕ್ರಮ ಜರುಗಿಸುತ್ತೇವೆ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/06/2022 04:48 pm

Cinque Terre

47.7 K

Cinque Terre

0

ಸಂಬಂಧಿತ ಸುದ್ದಿ