ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಸರ್ಕಾರಿ ಶಾಲೆಗಳು ನಶಿಸಿ ಹೋಗುತ್ತಿವೆ. ಅಂತದರಲ್ಲಿ ಇಲ್ಲೊಂದು ಶಾಲೆಯಲ್ಲಿ ಚರಂಡಿ ನೀರು ಶಾಲಾ ಆವರಣದ ತುಂಬ ಹರಿಯುತ್ತಿದೆ ಇದರಿಂದ ಮೈದಾನ ಕೊಳಚೆಯಾಗಿದೆ. ಶಾಲಾ ಮಕ್ಕಳು ರಸ್ತೆ ದಾಟಲು ಪರದಾಡುತ್ತಿದ್ದಾರೆ ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನಗರದ ಲೋಹಿಯಾ ನಗರದ ಸರ್ಕಾರಿ ಶಾಲೆಯಲ್ಲಿ.
ಹೌದು. ವಾರ್ಡ್ ನಂಬರ್ 32 ರಲ್ಲಿ ಬರುವ ಲೋಹಿಯಾ ನಗರದಲ್ಲಿರುವ ಸರ್ಕಾರಿ ಶಾಲೆಯು ಅವ್ಯವಸ್ಥೆಯ ಆಗರವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ಮೈದಾನದಲ್ಲಿ ಗಿಡ ಗಂಟಿಗಳು ಬೆಳೆದು ಅಕ್ಷರಶಃ ಕಾಡಿನಂತಾಗಿ ಹುಳ ಹಾವುಗಳು ವಾಸಸ್ಥಾನವಾಗಿ ಮಾರ್ಪಾಡಾಗಿದೆ. ಅಷ್ಟೆ ಅಲ್ಲದೆ ಈ ಶಾಲೆಯ ಆವರಣಕ್ಕೆ ಚರಂಡಿ ನೀರು ಬಂದು ಸೇರುತಿದ್ದು ಇನ್ನು ಕೆಲವು ದಿನ ಕಳದರೆ ಕೊಳಚೆ ಪ್ರದೇಶ ಅಗುವುದಂತು ಗ್ಯಾರಂಟಿ. ಈ ಸಮಸ್ಯೆಗಳನ್ನು ಬಗೆಹರಿಸಲೆಂದು ಇಲ್ಲಿನ ಸ್ಥಳೀಯರು ಮತ್ತು ಮಕ್ಕಳ ಪಾಲಕರು ಪಾಲಿಕೆ ಸದಸ್ಯರಿಗೆ ಮತ್ತು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು ಕೂಡ ಯಾರು ಕ್ಯಾರೆ ಎನ್ನುತ್ತಿಲ್ಲವಂತೆ ಎಂದು ಆರೋಪ ಮಾಡುತ್ತಿದ್ದಾರೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಅನೇಕ ಯೋಜನೆಗಳನ್ನು ತರುತ್ತಿದೆ. ಆದರೆ ಶಾಲೆಯೆ ನೆಟ್ಟಗಿಲ್ಲದಿದ್ದರೆ ಮಕ್ಕಳು ಓದುವದಾದರು ಹೇಗೆ? ಕೂಡಲೆ ಸಂಭದಿಸಿದ ಪಾಲಿಕೆ ಅಧಿಕಾರಿಗಳು ಈ ಶಾಲೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ಮಕ್ಕಳು ನಿರ್ಭಿತವಾಗಿ ಓದುವಂತೆ ಮತ್ತು ಮೈದಾನದಲ್ಲಿ ಓಡಾಡುವಂತೆ ಕಾಮಗಾರಿಯನ್ನು ಮಾಡಬೇಕಿದೆ
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
20/06/2022 06:45 pm