ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಧಿಕಾರಿಗಳ ನೇತೃತ್ವದಲ್ಲಿ ವಿದ್ಯುತ್ ಅದಾಲತ್

ನವಲಗುಂದ : ಶನಿವಾರ ನವಲಗುಂದ ತಾಲ್ಲೂಕಿನ ಗುಡಿಸಾಗರ ಹಾಗೂ ಇಬ್ರಾಹಿಂಪೂರ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ಮೂರನೇ ಶನಿವಾರ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮದಲ್ಲಿ ಹಳ್ಳಿಗಳ ಗ್ರಾಹಕರು ತಮ್ಮ ವಿದ್ಯುತ್‌ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳುವ ಕಾರ್ಯಕ್ರಮ ಇದಾಗಿದೆ.

ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಗ್ರಾಹಕರಿಗೆ ಅಧಿಕಾರಿಗಳಿಂದ ಜಾಗೃತಿಯನ್ನು ಸಹ ಮೂಡಿಸಿದರು. ವಿದ್ಯುತ್ ಸುರಕ್ಷತೆ ಬಗ್ಗೆ ತಿಳಿಹೇಳಲಾಯಿತು. ಹಾಗೂ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ.

ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಪ್ರಧಾನ ವ್ಯವಸ್ಥಾಪಕರು ಜಗದೀಶ ಬೆಳಗಲಿ, ಸೆಕ್ಷನ್ ಆಫೀಸರ್ ಸಿ. ವೈ ಬಾವಿಕಟ್ಟಿ, ಗ್ರಾಮೀಣ ಸೆಕ್ಷನ್ ಆಫೀಸರ್ ಎಂ ಎಂ ಆಡಿನ್, ಎ ಎ ಓ ಎಸ್.ಆರ್ ಡೊಳ್ಳಿನ, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾನಂದ ಚಿಪ್ಪಾಡಿ, ಪಿಡಿಓ ಕೋರವಾರ ಅವರುಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಇನ್ನು ಗುಡಿಸಾಗರ ಗ್ರಾಮದಲ್ಲಿ ಎಇಇ ಸಾವಿತ್ರಿ ಮಾಣಿಕಟ್ಟಿ, ಎಇಇ ಪ್ರಸಾದ ಘಾಟಿಕರ, ಎಎಓ ಆಸ್ಮಾ ಬನ್ನೂರ, ಮೇಲ್ವಿಚಾರಕರಾದ ಎಚ್ ಎಂ ಶಾನವಾಡ ಅವರ ನೇತೃತ್ವದಲ್ಲಿ ಗ್ರಾಮಸ್ತರಿಗೆ ತಿಳುವಳಿಕೆ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

18/06/2022 09:10 pm

Cinque Terre

27.25 K

Cinque Terre

0

ಸಂಬಂಧಿತ ಸುದ್ದಿ