ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್‌ಗಳ ಕೊರತೆಯಿಂದ ಹಳ್ಳಿ ಜನರ ಪರದಾಟ!

ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಹುಬ್ಬಳ್ಳಿಯ ಗ್ರಾಮೀಣ ಭಾಗದಲ್ಲಿ ಸರಿಯಾದ ರೀತಿಯ ಬಸ್ಸುಗಳ ಸೌಲಭ್ಯವಿಲ್ಲ. ಇದರಿಂದ ಪ್ರಮಾಣಿಕರು ದಿನನಿತ್ಯ ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಬರಲು ಪರದಾಟ ಪಡುತ್ತಿದ್ದಾರೆ.

ಹೌದು, ಮೊನ್ನೆ ಮೊನ್ನೆ ತಾನೇ ಸರ್ಕಾರಿ ಬಸ್ಸುಗಳ ಕೊರತೆಯಿಂದ ಜನರು ಖಾಸಗಿ ವಾಹನದಲ್ಲಿ ಅಣ್ಣಿಗೇರಿ ತಾಲೂಕಿನ ಶಿಶುವಿನಹಳ್ಳಿಯಿಂದ ನಲವಡಿಗೆ ಬರುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿ ಮಕ್ಕಳು, ವೃದ್ಧರು ತೀವ್ರವಾಗಿ ಗಾಯಗೊಂಡಿದ್ದರು. ಇಷ್ಟಾದರೂ ಸಹಿತ ಸಾರಿಗೆ ಇಲಾಖೆಯವರು ಯಾಕೆ ಎಚ್ಚೆತ್ತುಕೊಳ್ಳತ್ತಾ ಇಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.‌

ಇನ್ನು ಎಷ್ಟೋ ಕಡೆಗಳಲ್ಲಿ ಪ್ರಯಾಣಿಕರು ಬಸ್ಸುಗಳಿಗೆ ಹತ್ತೋದಿಲ್ಲ. ಸಾರಿಗೆ ಸಂಸ್ಥೆಗೆ ನಷ್ಟ ಆಗುತ್ತದೆ ಸರಿ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳತ್ತಾರೆ. ಆದರೆ ಕೆಲವೊಂದು ಭಾಗದಲ್ಲಿ ಪ್ರಯಾಣಿಕರು ಇದ್ದರು ಸಹಿತ ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದೇ, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಜನರು ಇನ್ನಿಲ್ಲದ ಪರಿಪಾಟಿಲು ಅನುಭವಿಸುವಂತಾಗಿದೆ.

ಹೀಗಾಗಿ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೇಲೆ ಅವಲಂಬನೆ ಆಗುವಂತಹ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದ್ದು, ಆಟೋ, ಟಾಟಾ ಏಸ್, ಟ್ಯಾಕ್ಸಿಗಳಲ್ಲಿ ಜೋತು ಬಿದ್ದು ನಗರಗಳಿಗೆ ಬರುವಂತಾಗಿದೆ. ಆದ ಕಾರಣ ಬಸ್‌ಗಳ ಖರೀದಿ ಮಾಡಿ, ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳುತ್ತಾರೆ.

ಒಟ್ಟಿನಲ್ಲಿ ಹುಬ್ಬಳ್ಳಿ ಗ್ರಾಮೀಣ ಭಾಗದ ಜನರು ಸಂಚಾರಿ ವಾಹನಗಳಿಲ್ಲದೇ ಖಾಸಗಿ ವಾಹನಗಳಲ್ಲಿ ಡೆಂಜರಸ್ ಪ್ರಯಾಣ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ಸಾರಿಗೆ ಸಚಿವರು ಇತ್ತ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
Kshetra Samachara

Kshetra Samachara

18/06/2022 02:36 pm

Cinque Terre

26.7 K

Cinque Terre

3

ಸಂಬಂಧಿತ ಸುದ್ದಿ