ನವಲಗುಂದ : ಸ್ವಚ್ಛ ನವಲಗುಂದಕ್ಕಾಗಿ ಪುರಸಭೆ ಸಾಕಷ್ಟು ಶ್ರಮಿಸುತ್ತಿದೆ. ನವಲಗುಂದ ಪಟ್ಟಣದ ಹಲವೆಡೆ ಜಾಗೃತಿ ಫಲಕಗಳನ್ನು ಸಹ ಅಳವಡಿಸಲಾಗಿದೆ. ಆದರೂ ಸಹ ಸಾರ್ವಜನಿಕರು ಫಲಕವನ್ನು ನಿರ್ಲಕ್ಷಿಸಿ, ಕೆಲವೊಮ್ಮೆ ಅಲ್ಲಿಯೇ ಕಸ ಎಸೆಯುತ್ತಿದ್ದಾರೆ. ಇದಕ್ಕೆ ಈಗ ಶನಿವಾರ ನವಲಗುಂದ ಪುರಸಭೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.
ಹೌದು ನವಲಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧೀ ಮಾರುಕಟ್ಟೆಯಲ್ಲಿ ಅಳವಡಿಸಲಾಗಿದ್ದ "ಸ್ವಚ್ಛ ಮೇವ ಜಯತೇ" ಎಂಬ ಜಾಗೃತಿ ಫಲಕದ ಎದುರೇ ರಾಶಿ ರಾಶಿ ಕಸವನ್ನು ಎಸೆಯಲಾಗಿತ್ತು. ಇದನ್ನು ಪುರಸಭೆ ಸಿಬ್ಬಂದಿಗಳು ಸಂಪೂರ್ಣ ಶುಚಿಗೊಳಿಸಿ, ರಂಗೋಲಿ ಬಿಡಿಸಿ, "ನವಲಗುಂದ ನಗರವನ್ನು ಕಸ ಮುಕ್ತ ಮಾಡಲು ಕೈ ಜೋಡಿಸಿ" ಎಂದು ಬರೆದು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು.
Kshetra Samachara
18/06/2022 11:09 am