ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹಸಿ ಕಸ, ಒಣ ಕಸ ಬೇರ್ಪಡಿಸಲು ಪುರಸಭೆ ವತಿಯಿಂದ ಬಕೆಟ್ ವಿತರಣೆ

ನವಲಗುಂದ : ನವಲಗುಂದ ಪುರಸಭೆಯ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ, ಪುರಸಭೆಯ ಕಸ ವಿಲೇವಾರಿ ವಾಹಣಕ್ಕೆ ನೀಡುವಂತೆ ನವಲಗುಂದ ಪುರಸಭೆ ವತಿಯಿಂದ ಮನೆಗೆ ತಲಾ ಎರಡು ಬಕೆಟ್ ಗಳನ್ನು ವಿತರಣೆ ಮಾಡಿದರು.

ನವಲಗುಂದ ಪಟ್ಟಣದ ಪುರಸಭೆ ಸಭಾಂಗಣದ ಎದುರು ಪುರಸಭೆ ವತಿಯಿಂದ ಒಣ ಕಸ ಸಂಗ್ರಹಕ್ಕೆ ನೀಲಿ ಹಾಗೂ ಹಸಿ ಸಂಗ್ರಹಕ್ಕೆ ಹಸಿರು ಬಣ್ಣವುಳ್ಳ ಬಕೆಟ್‌ಗಳನ್ನು ನೀಡಲಾಯಿತು. ವಿತರಣೆ ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/06/2022 10:29 am

Cinque Terre

9.11 K

Cinque Terre

0

ಸಂಬಂಧಿತ ಸುದ್ದಿ