ನವಲಗುಂದ : ಧಾರವಾಡ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಹಿನ್ನೆಲೆ ಜೂನ್ 18 ರಂದು ನವಲಗುಂದ ತಾಲ್ಲೂಕಿನ ಇಬ್ರಾಹಿಂಪೂರ ಹಾಗೂ ಗುಡಿಸಾಗರ ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ.
ಹೌದು ನವಲಗುಂದ ತಾಲೂಕು ಸೇರಿದಂತೆ ಧಾರವಾಡ ತಾಲೂಕಿನ ರಾಮಾಪೂರ, ಕೊಟಬಾಗಿ, ಮನಸೂರ, ಹೊನ್ನಾಪೂರ, ತಡಕೋಡ, ಶಿವಳ್ಳಿ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ, ಕುರಡಿಕೇರಿ, ಸುಳ್ಳ,ಕಲಘಟಗಿ ತಾಲೂಕಿನ ಬೆಲವಂತರ, ಗಳಗಿ, ದೇವಲಿಂಗಕೊಪ್ಪ, ನವಲಗುಂದ ತಾಲೂಕಿನ ಇಬ್ರಾಹಿಂಪೂರ, ಗುಡಿಸಾಗರ ಮತ್ತು ಕುಂದಗೋಳ ತಾಲೂಕಿನ ಗುಡಗೇರಿ, ಕೂಬಿಹಾಳ ಗ್ರಾಮಗಳಲ್ಲಿ ಜೂನ್ 18 ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಅದಾಲತ್ ನಡೆಯಲಿವೆ.
ಹೆಸ್ಕಾಂ ಅಧಿಕಾರಿಗಳು ಅದಾಲತ್ ನಲ್ಲಿ ಭಾಗವಹಿಸುವರು. ಆಯಾ ಹಳ್ಳಿಗಳ ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೆಸ್ಕಾಂನ ಅಧೀಕ್ಷಕ ಇಂಜಿನೀಯರ್ ಎಸ್. ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
17/06/2022 08:35 pm