ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪರಿಹಾರ ಕೊಡದ ಅಧಿಕಾರಿಗಳ ಮೇಲೆ ಬಿತ್ತು ಕೇಸ್

ಧಾರವಾಡ: ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂಮಿ ಕಳೆದುಕೊಂಡ ಸಂತ್ರಸ್ತ ಮಹಿಳೆಯೊಬ್ಬರಿಗೆ ಪರಿಹಾರ ಕೊಡದ ಹಿನ್ನೆಲೆಯಲ್ಲಿ ಕೆಐಎಡಿಬಿ ಅಧಿಕಾರಿಗಳ ಮೇಲೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಟಿಗಟ್ಟಿ ಗ್ರಾಮದ ಅಕ್ಕವ್ವ ಲಕ್ಕಪ್ಪನವರ ಎಂಬ ಮಹಿಳೆಗೆ ಸೇರಿದ ಒಂದು ಎಕರೆ ಜಮೀನನ್ನು ಗಾಮನಗಟ್ಟಿ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿತ್ತು. ಇದರಲ್ಲಿ ಅಕ್ಕವ್ವಳಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಆದರೆ, ಈ ಹಣ ಅಧಿಕಾರಿಗಳ ಅಚಾತುರ್ಯದಿಂದ ಆಕೆಯ ಕೈ ಸೇರಿಲ್ಲ. ಅಧಿಕಾರಿಗಳು ಹಾಗೂ ಅಕ್ಕವ್ವಳ ಸಹೋದರರು ಸೇರಿಕೊಂಡು ಪೋರ್ಜರಿ ಸಹಿ ಮಾಡಿಸಿ, ಅಕ್ಕವ್ವಳಿಗೆ ಸೇರಬೇಕಾದ ಪರಿಹಾರದ ಮೊತ್ತವನ್ನು ಆಕೆಯ ಸಹೋದರರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.

ಪರಿಹಾರ ಕೇಳಲು ಹೋದರೆ, ನಾವು ಹಣ ಜಮಾ ಮಾಡೇ ಇಲ್ಲ ಎಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಅಕ್ಕವ್ವ ದೂರಿದ್ದಾರೆ. ಈಗಾಗಲೇ ಪರಿಹಾರದ ಮೊತ್ತಕ್ಕಾಗಿ ಅಕ್ಕವ್ವ ಸಾಕಷ್ಟು ಬಾರಿ ಕೆಐಎಡಿಬಿ ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೀಗ ಕೆಐಎಡಿಬಿ ಅಧಿಕಾರಿಗಳಾದ ಶಂಕರ ತಳವಾರ, ವಸಂತಕುಮಾರ ಸಜ್ಜನ ಸೇರಿದಂತೆ ಆಕೆಯ ಸಹೋದರರಾದ ತುಕಾರಾಂ ಪೂಜಾರ, ಕರೆಪ್ಪ ಪೂಜಾರ, ರಾಮಪ್ಪ ಪೂಜಾರ ಹಾಗೂ ಫಕ್ಕೀರಪ್ಪ ಪೂಜಾರ ಅವರ ಮೇಲೆ ಅಕ್ಕವ್ವ ದೂರು ದಾಖಲಿಸಿದ್ದಾಳೆ.

ಈ ಹಿಂದೆ ಅಕ್ಕವ್ವ ತನಗೆ ಪರಿಹಾರ ಕೊಡುವಂತೆ ಕೆಐಎಡಿಬಿ ಅಧಿಕಾರಿ ಕಾಲಿಗೆ ಬಿದ್ದು ಪರಿ ಪರಿಯಾಗಿ ಬೇಡಿಕೊಂಡಿದ್ದಳು. ಆದರೆ, ಫೋರ್ಜರಿ ಸಹಿ ಮಾಡಿಸಿ ಅಧಿಕಾರಿಗಳು ಅಕ್ಕವ್ವಳ ಸಹೋದರನ ಬ್ಯಾಂಕ್ ಖಾತೆಗೆ ಒಟ್ಟು 4 ಕೋಟಿ 8 ಲಕ್ಷ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅಕ್ಕವ್ವ ಅವರಿಗೆ 55 ಲಕ್ಷ ಪರಿಹಾರ ಬರಬೇಕಿದೆ. ಸದ್ಯ ಅಕ್ಕವ್ವ ದೂರು ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

16/06/2022 03:45 pm

Cinque Terre

16.59 K

Cinque Terre

1

ಸಂಬಂಧಿತ ಸುದ್ದಿ