ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಆವರಿಸಿದ ಸಾಲು ಸಾಲು ಸಮಸ್ಯೆ; ಕಮಿಷನರ್‌ ನೋ ರೆಸ್ಪಾನ್ಸ್ !

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ದಿನದಿಂದ ದಿನಕ್ಕೆ ಹತ್ತಾರು ಸಮಸ್ಯೆ ಉದ್ಭವವಾಗುತ್ತಿವೆ. ಆದರೂ ಹು-ಧಾ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಮಾತ್ರ ತನಗೆ ಇದ್ಯಾವುದೂ ಸಂಬಂಧ ಪಡದ ರೀತಿಯಲ್ಲಿ ವರ್ತಿಸುತ್ತಿದ್ದಾರೆ!

ಹುಬ್ಬಳ್ಳಿ- ಧಾರವಾಡದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬ, ಚರಂಡಿ ನೀರು ನುಗ್ಗುವಿಕೆ ಬವಣೆ, ಕುಡಿಯುವ ನೀರಿಗೆ ಚಡಪಡಿಕೆ, ಕಸ ವಿಲೇವಾರಿ ಕಿರಿಕಿರಿ, ಸ್ಮಾರ್ಟ್ ಸಿಟಿ ಕಾಮಗಾರಿ ಯಡವಟ್ಟು ಇಂತಹ ಹಲವಾರು ಸಮಸ್ಯೆ ಕುರಿತು ʼಪಬ್ಲಿಕ್ ನೆಕ್ಸ್ಟ್ʼ ಸವಿಸ್ತಾರವಾಗಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿ, ಬಹುತೇಕ ಯಶಸ್ವಿಯಾಗಿತ್ತು. ಆದರೆ, ಇಲ್ಲಿ ಯಾವುದೇ ಪ್ರಯೋಜನವಾಗಿಲ್ಲ.

ಯಾಕೆಂದ್ರೆ, ಕೇವಲ ಸುದ್ದಿ ನೋಡಿದ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಈ ಬಗ್ಗೆ ಕೆಲಸ ಮಾಡುವ ಭರವಸೆಯಷ್ಟೇ ನೀಡಿ, ಆ ಬಳಿಕ ದಿನಗಳು ಉರುಳಿದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಈಗ ಹುಬ್ಬಳ್ಳಿ ಜನ ರೊಚ್ಚಿಗೆದ್ದು, ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

-‌ ಈರಣ್ಣ ವಾಲಿಕಾರ ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

09/06/2022 04:32 pm

Cinque Terre

31.57 K

Cinque Terre

8

ಸಂಬಂಧಿತ ಸುದ್ದಿ