ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಸೇಲ್ ಸೇವಿಂಗ್ ನಲ್ಲಿ ನೈಋತ್ಯ ರೈಲ್ವೆ ದಾಖಲೆ: ಪರಿಸರಕ್ಕೆ ಪೂರಕವಾದ ಚಿಂತನೆ..!

ಹುಬ್ಬಳ್ಳಿ: ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರಕ್ಕೂ ಹೆಚ್ಚು ಕೋಟಿ ಉಳಿತಾಯ ಮಾಡಿದ್ದ ನೈಋತ್ಯ ರೈಲ್ವೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಕಲ್ಲಿದ್ದಲು, ಡಿಸೇಲ್ ಮೂಲಕ ರೈಲು ಚಾಲನೆ ಮಾಡಿದ್ದ ಭಾರತೀಯ ರೈಲ್ವೆ ಈಗ ವಿದ್ಯುತ್ ಚಾಲಿತ ರೈಲು ಚಾಲನೆ ಮಾಡುವ ಮೂಲಕ ಇಂಧನ ಉಳಿತಾಯದ ಜೊತೆಗೆ ಪರಿಸರ ರಕ್ಷಣೆ ಹೊಣೆ ಹೊತ್ತಿದೆ.

ಹೌದು. ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ-ಗುಂಟಕಲ್‌-ಹುಬ್ಬಳ್ಳಿ ಪ್ಯಾಸೆಂಜರ್‌ ರೈಲನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಸಂಚರಿಸುವಂತೆ ಮಾಡಿದೆ. ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಡೀಸೆಲ್ ಲೋಕೋಮೋಟಿವ್ ನಿಂದ ಸಂಚರಿಸುತ್ತಿತ್ತು. ಈ ರೈಲು ಎಲೆಕ್ಟ್ರಿಕಲ್ ಎಂಜಿನ್ ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 2,056 ಲೀಟರ್ ಗಳಷ್ಟು ಡೀಸೆಲ್ ಉಳಿತಾಯವಾಗುವುದು. ಅಲ್ಲದೇ ಪ್ರತಿ ತಿಂಗಳು ಸುಮಾರು 61,000 ಲೀಟರ್‌ ಡೀಸೆಲ್‌ ಉಳಿತಾಯವಾಗಲಿದೆ. ನೈಋತ್ಯ ರೈಲ್ವೆಯಲ್ಲಿ. 2019-20 ಹಾಗೂ 2020-21ರಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುವಂತೆ ವಿಸ್ತರಿಸಲಾಗಿದೆ.

ಇನ್ನೂ ಡಿಸೆಂಬರ್‌ 2021ರಿಂದ ಹುಬ್ಬಳ್ಳಿ ವಿಭಾಗದಲ್ಲಿ , 3 ರೈಲುಗಳು ವಿದ್ಯುತ್ ಚಾಲಿತವಾಗಿ ಸಂಚಾರ ನಡೆಸಿವೆ. ಮೈಸೂರು- ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌, ವಿಜಯವಾಡ-ಹುಬ್ಬಳ್ಳಿ-ವಿಜಯವಾಡ ಅಮರಾವತಿ ಎಕ್ಸ್‌ಪ್ರೆಸ್‌ ಮತ್ತು ಹುಬ್ಬಳ್ಳಿ-ಡಾ. ಎಂ.ಜಿ.ಆರ್‌. ಚೆನ್ನೈ ಸೆಂಟ್ರಲ್‌-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ - ಮೊದಲ ನಿಲ್ದಾಣದಿಂದ ಕೊನೆಯ ನಿಲ್ದಾಣದವರೆಗೆ ಎಲೆಕ್ಟ್ರಿಕ್‌ ಎಂಜಿನ್‌ ನಿಂದ ಸಂಚರಿಸತೊಡಗಿದೆ. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ಅವರು ವಿಶೇಷವಾಗಿ ಈಗಾಗಲೇ ವಿದ್ಯುದೀಕರಣ ಕಾರ್ಯ ಪೂರ್ಣವಾಗಿರುವ ಭಾಗಗಳಲ್ಲಿ ಕ್ರಮೇಣ ಮತ್ತಷ್ಟು ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುವಂತೆ ಮಾಡಲು ನೈಋತ್ಯ ರೈಲ್ವೆ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ನೈಋತ್ಯ ರೈಲ್ವೆ ವಿದ್ಯುದೀಕರಣದಲ್ಲಿ ದಾಖಲೆಯನ್ನು ಸಾಧಿಸಿದೆ. 2021-22 ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆಯು 511.7 ರೂಟ್ ಕೀ.ಮೀಗಳ ವಿದ್ಯುದೀಕರಣವನ್ನು ಪೂರ್ಣಗೊಳಿಸಿದ್ದು, ಹಸಿರು ರೈಲ್ವೆಯಾಗಿ ಮಾಡಲು ನೈಋತ್ಯ ರೈಲ್ವೆ ನಿರ್ಧಾರ ಮಾಡಿದೆ.

Edited By : Manjunath H D
Kshetra Samachara

Kshetra Samachara

06/06/2022 07:07 pm

Cinque Terre

33.4 K

Cinque Terre

1

ಸಂಬಂಧಿತ ಸುದ್ದಿ