ಹುಬ್ಬಳ್ಳಿ : ನಮಸ್ಕಾರಿ ರೀ ಮಾನ್ಯ ಹುಬ್ಬಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೂ ನಿಮ್ಮದೇ ವ್ಯಾಪ್ತಿಯ ಈ ಹಳ್ಯಾಳದಿಂದ ಕಡಪಟ್ಟಿಗೆ ಸಂಪರ್ಕ ಮಾಡೋ ಕೇವಲ ಒಂದು ಕಿಲೋ ಮೀಟರ್ ರಸ್ತೆ ಅವ್ಯವಸ್ಥೆ ಗಮನಿಸಿದ್ದೀರಾ ?
ಬರೀ ಮೊದ್ಲ ಈ ರಸ್ತೆ ನೋಡ್ರಿ ಸ್ವಲ್ಪ ನಿಮಗೂ ಅಲ್ಲಿ ಏನ್ ಐತಿ ಅಂತಾ ಗೊತಕೇತಿ. ಈ ಹಳ್ಯಾಳದಿಂದ ಕಡಪಟ್ಟಿಗೆ ಸಂಪರ್ಕ ಮಾಡೋ ರಸ್ತೆ ಅವ್ಯವಸ್ಥೆ ನೋಡಿದ್ರ ನೀವೂ ಈ ರಸ್ತೆ ಮರೆತಿರಿ ಅನುದು ಗ್ಯಾರಂಟಿ ಅಕೇತಿ.
ಇಡೀ ರಸ್ತೆ ತುಂಬ ಕೊಳಚೆ ನೀರು ತಗ್ಗು ಗುಂಡಿಗಳದ್ದ ದರ್ಬಾರ್ ಇನ್ನ ಮಂದಿ ಈ ಕೊಳಕನ್ಯಾಗ ಅಡ್ಯಾಡಬೇಕ. ಕುಂದಗೋಳ ಕಡಪಟ್ಟಿ ಹಳ್ಯಾಳ ಮಾರ್ಗವಾಗಿ ನೂರೆಂಟು ವಾಹನ ಓಡಾಟದ ರಸ್ತೆ ಹಿಂಗ ಸಂಪೂರ್ಣ ಕಲುಷಿತ ನೀರು, ಕಲ್ಲು, ತಗ್ಗು ಗಂಡಿಗಳಿಂದ ಭರ್ತಿಯಾಗಿ ಖಾಸಗಿ ಹಾಗೂ ಸಾರಿಗೆ ಬಸ್ ಸಂಚಾರಕ್ಕ ಸಂಚಕಾರ ತಂದೈತಿ.
ಮುಖ್ಯವಾಗಿ ಹಳ್ಯಾಳ ಗ್ರಾಮಸ್ಥರಿಗೆ ಸ್ಮಶಾನಕ್ಕ ಶವ ತೆಗೆದುಕೊಂಡು ಹೋಗಾಗ ಒದ್ಯಾಡಬೇಕಾಗೇತಿ ನೋಡ್ರಿ. ಮಳೆಗಾಲದಾಗ ಮಂದಿ ಅಧಿಕಾರಿಗಳಿಗೆ ಶಾಪ ಹಾಕಿ ಮುಂದ ಹೋಗಬೇಕಾಗೇತಿ.
ಇನ್ನಾದರೂ ಈ ಬಗ್ಗೆ ಗಮನಿಸಿ ರಸ್ತೆ ಅವ್ಯವಸ್ಥೆ ಸರಿ ಮಾಡ್ರಿ..
Kshetra Samachara
04/06/2022 01:53 pm