ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಶುದ್ಧ ಕುಡಿಯುವ ನೀರಿನ ಘಟಕ ಇಲ್ಲಿ ಅನುಪಯುಕ್ತ

ಅಳ್ನಾವರ: ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲವಾಗುವ ದೂರ ದೃಷ್ಟಿಯಿಂದ ಅಳ್ನಾವರ ಪಟ್ಟಣದ 'ರೈತ ಸಂಪರ್ಕ ಕೇಂದ್ರ'ದ ಎದುರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದಾರೆ. ಆದರೆ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯವೋ ಏನೋ ಶುದ್ಧ ಕುಡಿಯುವ ನೀರಿನ ಘಟಕ ದಿಂದ ಒಂದೇ ಒಂದು ಹನಿ ನೀರು ಸಹ ಬಂದಿಲ್ಲವೆಂದರೇ ನಿಜಕ್ಕೂ ಬೇಸರವೆನಿಸುತ್ತದೆ.

ಹೌದು. 2017-2018 ರಲ್ಲಿ ಪಟ್ಟಣದ 'ರೈತ ಸಂಪರ್ಕ ಕೇಂದ್ರ'ದ ಎದುರು ಶುದ್ಧ ಕುಡಿಯುವ ನೀರಿನ ಘಟಕವನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದರು. ಆದರೆ ಅದು ಉದ್ಘಾಟನೆಯಾದಾಗಿನಿಂದ ಇಂದಿನವರೆಗೂ ಅದರಲ್ಲಿ ನೀರು ಬಂದಿಲ್ಲ. ಅಷ್ಟೇ ಯಾಕೆ ಅದರತ್ತ ತಿರುಗಿ ಸಹ ನೋಡುವಷ್ಟು ಪುರಸೊತ್ತು ಪಟ್ಟಣ ಪಂಚಾಯಿತಿಯವರಿಗಿಲ್ಲ.

ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದೇನೋ ಒಳ್ಳೆಯದೇ.ಆದರೆ ಅದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಉಪಯೋಗ ವಾಗುತ್ತಿದೆ ಎಂಬುದು ಬಹು ಮುಖ್ಯವಾದದ್ದು. ಇಲ್ಲಿ ಇನ್ನೊಂದು ಹಮನಾರ್ಹ ಸಂಗತಿ ಏನೆಂದರೆ ಪಟ್ಟಣದಲ್ಲಿರುವ ಅಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲ್ತಿ ಎಲ್ಲಿವೆ.ಆದರೆ ರೈತ ಸಂಪರ್ಕ ಕೇಂದ್ರ ದ ಎದುರು ಇರುವ ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ಅಂದಿನಿಂದ ಇಂದಿನವರೆಗೂ ಬಂದಾಗಿಯೇ ಇದೆ. ಇಲ್ಲಿ ಮತ್ತು ರೈತರಿಗೆಯೇ ಅನ್ಯಾಯವಾಗುತ್ತಿದೆ. ರೈತ ಸಂಪರ್ಕ ಕೇಂದ್ರಕ್ಕೆ ಬರುವವರು ರೈತರೇ ವಿನಃ ಬಿಸಿನೆಸ್ ಮ್ಯಾನ್ ಗಳಲ್ಲ. ಇನ್ನಾದರೂ ಸುಧಾರಿಸುತ್ತಾ ಕಾದು ನೋಡಬೇಕಿದೆ.

ಮಹಾಂತೇಶ ಪಠಾಣಿ

ಪಬ್ಲಿಕ್ ನೆಕ್ಸ್ಟ್

ಅಳ್ನಾವರ.

Edited By :
Kshetra Samachara

Kshetra Samachara

01/06/2022 10:16 pm

Cinque Terre

16.17 K

Cinque Terre

1

ಸಂಬಂಧಿತ ಸುದ್ದಿ