ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪರಿಸರ ಸ್ನೇಹಿಯಾಗಿ ಹೊರಹೊಮ್ಮಲಿದೆ ನೈರುತ್ಯ ರೈಲ್ವೆ : ಮತ್ತೊಂದು ನಿರ್ಧಾರಕ್ಕೆ ಗ್ರೀನ್ ಸಿಗ್ನಲ್....!

ಹುಬ್ಬಳ್ಳಿ : ಅದು ವಿಶ್ವದಲ್ಲಿಯೇ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಹೊಂದಿರುವ ವಲಯ. ಈ ವಲಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಆವಿಷ್ಕಾರಗಳು, ವಿನೂತನ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಮೊನ್ನೆಯಷ್ಟೇ ಸೌರಶಕ್ತಿ ಸದ್ಬಳಿಕೆಯಲ್ಲಿ ದಾಖಲೆ ಮಾಡಿದ್ದ ಆ ವಲಯ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಹಾಗಿದ್ದರೇ ಯಾವುದು ಆ ವಲಯ...? ಮಹತ್ವದ ಹೆಜ್ಜೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ನೈರುತ್ಯ ರೈಲ್ವೆಯು ತನ್ನ ಸೇವಾ ಕಟ್ಟಡಗಳು, 120 ನಿಲ್ದಾಣಗಳು, ಲೆವೆಲ್ ಕ್ರಾಸಿಂಗ್ ಗೇಟ್ ಗಳು ಸೇರಿದಂತೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋವಾಟ್ ಸಾಮರ್ಥ್ಯದ ಸೌರಫಲಕಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.

ಇದರಿಂದಾಗಿ, ರೈಲ್ವೆಗೆ ವಿದ್ಯುತ್ ಬಿಲ್ನಲ್ಲಿ 1.96 ಕೋಟಿ ಉಳಿತಾಯವಾಗಿದೆ. ಈಗ ಮುಂದುವರಿದ ಭಾಗವಾಗಿ ನೈರುತ್ಯ ರೈಲ್ವೆ ವಲಯದಲ್ಲಿ ಹೆಚ್ಚಿನ ಸೌರ್ ವಿದ್ಯುತ್ ಉತ್ಪಾದನೆ ಮಾಡಿ ನೈರುತ್ಯ ರೈಲ್ವೆ ವಲಯದಿಂದಲೇ ಹೆಚ್ಚಿನ ಸೌರಶಕ್ತಿ ವಿದ್ಯುತ್ ಗ್ರೀಡ್ ಗಳಿಗೆ ವಿತರಿಸುವ ಚಿಂತನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ನೈರುತ್ಯ ರೈಲ್ವೆ ವಲಯದ 26 ರೈಲ್ವೆ ನಿಲ್ದಾಣಕ್ಕೆ ಸೋಲಾರ್ ಪ್ಯಾನೆಲ್ ಅಳವಡಿಸಲು ಮುಂದಾಗಿದೆ.

ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್ ಅಗತ್ಯತೆಯ ಶೇ 70ರಷ್ಟು ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಕಾರ್ಯಾಗಾರದ ಶೇ 83ರಷ್ಟು ವಿದ್ಯುತ್ (ಒಟ್ಟು ವಿದ್ಯುತ್ ಅಗತ್ಯ 13.51 ಲಕ್ಷ ಯುನಿಟ್) ಹಾಗೂ ಇಎಂಡಿ ಶೆಡ್ನ ವಾರ್ಷಿಕ 1.13 ಲಕ್ಷ ಯುನಿಟ್ಗಳ ವಿದ್ಯುತ್ ಬಳಕೆಯ ಪೈಕಿ ಶೇ 60ರಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದ ಪಡೆದುಕೊಳ್ಳಲಾಗಿದೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ ಸೌಧದಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಂದ 2.75 ಲಕ್ಷ ಯುನಿಟ್ ವಿದ್ಯುತ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 84,294 ಯುನಿಟ್, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 94,115 ಯುನಿಟ್ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಿರುವ ಸೌರಫಲಕಗಳಿಮದ 1.28 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.

ಒಟ್ಟಿನಲ್ಲಿ ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರಹೊಮ್ಮುವ ಗುರಿ ಹೊಂದಿದೆ. ಅಲ್ಲದೇ ವಾಯುಮಾಲಿನ್ಯ ನಿಯಂತ್ರಣ ಜವಾಬ್ದಾರಿಯನ್ನು ಹೊಂದಿರುವುದು ನಿಜಕ್ಕೂ ವಿಶೇಷವಾಗಿದೆ.

Edited By :
Kshetra Samachara

Kshetra Samachara

23/05/2022 09:49 pm

Cinque Terre

31.47 K

Cinque Terre

0

ಸಂಬಂಧಿತ ಸುದ್ದಿ