ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿವೃಷ್ಠಿ: ನೋಡಲ್ ಅಧಿಕಾರಿಗಳ ನೇಮಕ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಅತಿವೃಷ್ಠಿಯಿಂದ ಪ್ರವಾಹ ಉಂಟಾಗಬಹುದಾದ ಸಂಭವ ಇದೆ. ಜನ ಜಾನುವಾರು, ಮನೆ ಮತ್ತಿತರ ಹಾನಿ ಸಂಭವಿಸಿದರೆ ತುರ್ತು ಪರಿಹಾರ ಕ್ರಮಗಳನ್ನು ಜರುಗಿಸಲು ಪ್ರತಿ ತಾಲ್ಲೂಕಿಗೆ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ನಿಯೋಜಿಸಲಾದ ತಾಲೂಕುಗಳ ನೋಡಲ್ ಅಧಿಕಾರಿಗಳು ಅತಿವೃಷ್ಠಿ ಹಾನಿಯ ಪ್ರಮಾಣ ತಗ್ಗಿಸುವುದು, ಹಾನಿಯ ಮಾಹಿತಿ, ವಿವರಗಳನ್ನು ಒದಗಿಸುವುದು. ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವುದು. ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಸಮಿತಿಯ ಕಾರ್ಯ ಪರಿಶೀಲಿಸುವುದು. ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಅಥವಾ ಹಳ್ಳಗಳು ತುಂಬಿ ಪ್ರವಾಹ ಉಂಟಾಗುವ ಸಂಭವಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದು ಸೇರಿದಂತೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಲಾಗಿದೆ.

ನೋಡಲ್ ಅಧಿಕಾರಿಗಳ ವಿವರ: ಧಾರವಾಡ ತಾಲೂಕು - ಅಶೋಕ ತೇಲಿ, ಉಪವಿಭಾಗಾಧಿಕಾರಿಗಳು-8123295366,

ಹುಬ್ಬಳ್ಳಿ ತಾಲೂಕು- ಮಂಜುನಾಥ ಅಂತರವಳ್ಳಿ ಉಪ ಕೃಷಿ ನಿರ್ದೇಶಕರು-8277931272,

ಹುಬ್ಬಳ್ಳಿ ನಗರ- ಅಜೀಜ್ ದೇಸಾಯಿ, ಜಂಟಿ‌ ಆಯುಕ್ತರು, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ -7019764507,

ನವಲಗುಂದ ತಾಲೂಕು- ಸುಧೀರ್ ಸಾವ್ಕಾರ್, ಹಿರಿಯ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ -9845297783,

ಕುಂದಗೋಳ ತಾಲೂಕು- ರೇಖಾ ಡೊಳ್ಳಿನವರ, ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತ-9480864001,

ಕಲಘಟಗಿ ತಾಲೂಕು-

ಗೋಪಾಲ ಲಮಾಣಿ,ಜಿಲ್ಲಾ ಅಧಿಕಾರಿ,

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ-8748067302,

ಅಳ್ನಾವರ ತಾಲೂಕು- ಡಾ.ಉಮೇಶ ಕೊಂಡಿ, ಉಪನಿರ್ದೇಶಕರು, ಪಶು ವೈದ್ಯಕೀಯ ಸೇವೆಗಳ ಇಲಾಖೆ -9900675607,

ಅಣ್ಣಿಗೇರಿ ತಾಲೂಕು- ಮಮತಾ ನಾಯಕ್, ನಿರ್ದೆಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ -9591539062 ?ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿಲಾಗಿದೆ.

ತಮಗೆ ವಹಿಸಲಾದ ಕರ್ತವ್ಯಗಳನ್ನು ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/05/2022 04:53 pm

Cinque Terre

25.07 K

Cinque Terre

2

ಸಂಬಂಧಿತ ಸುದ್ದಿ