ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತೆಗೆ "ಗುರು-ಮಾಯಾ" ಭಾರಿ ಬಲ !

ಹುಬ್ಬಳ್ಳಿ: ಜನಪ್ರಿಯ ರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ, ಗುರು ಹಾಗೂ ಮಾಯಾ ಹೆಸರಿನ ಎರಡು ಬೆಲ್ಜಿಯಂ ಶಫರ್ಡ್ ಶ್ವಾನಗಳು ಸೇರ್ಪಡೆಯಾಗಿವೆ.

ಹೌದು.ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಒಂದು ವರ್ಷದ ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ತನ್ನ ಭದ್ರತಾ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಲ ಹೆಚ್ಚಿದಂತಾಗಿದೆ. ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ಏಳು ತಿಂಗಳು ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ತಳಿಯ ನಾಯಿಗಳು ಸ್ಫೋಟಕಗಳು ಮತ್ತು ಮಾದಕ ವಸ್ತುಗಳನ್ನು ವೇಗವಾಗಿ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿರುತ್ತವೆ.

'ಗುರು' ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆ ಮಾಡಲು ತರಬೇತಿ ನೀಡಲಾಗಿದೆ. 'ಮಾಯಾ'ಗೆ ಸ್ಫೋಟಕಗಳನ್ನು ಪತ್ತೆಹಚ್ಚುವ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದು, ವಿಮಾನಗಳಲ್ಲಿ ಸ್ಫೋಟಕಗಳು, ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಗ್ರಿಗಳಲ್ಲಿ ಅಪಾಯಕಾರಿ ವಸ್ತುಗಳಿದ್ದರೆ ಗುರುತಿಸಲು ಈ ಶ್ವಾನಗಳನ್ನು ಬಳಸಲಾಗುತ್ತದೆ.

ಭದ್ರತಾ ತಂಡದ ಶ್ವಾನದಳಕ್ಕೆ ಹೊಸ ತಳಿಗಳ ಸೇರ್ಪಡೆ ಸಮಯದಲ್ಲಿ ಭದ್ರತಾ ಪಡೆಯ ಮೂರನೇ ಬೆಟಾಲಿಯನ್‌ನ ಕಮಾಂಡೆಂಟ್‌ ಟಿ. ಫೈಜುದ್ದೀನ್‌, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಇನ್‌ಸ್ಪೆಕ್ಟರ್‌ ಮಹೇಶ್ ಹುದ್ದಾರ್‌, ಪಿಎಸ್‌ಐ ಹನುಮಂತ ಕರಿ, ಶ್ವಾನ ನಿರ್ವಹಣಾ ಅಧಿಕಾರಿಗಳಾದ ಮಹೇಶ್‌ ದೊಡ್ಡಮನಿ, ರಮೇಶ್ ಉಪ್ಪಾರ, ಫಕೀರಪ್ಪ ಹುಲ್ಲೂರು ಹಾಗೂ ಮಂಜುನಾಥ ಡಿ. ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

15/05/2022 05:02 pm

Cinque Terre

23.76 K

Cinque Terre

0

ಸಂಬಂಧಿತ ಸುದ್ದಿ