ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಮೆಗತಿಯಲ್ಲಿ ಪೈಪ್ ಲೈನ್ ಗ್ಯಾಸ್ ಸಂಪರ್ಕ: ಇಷ್ಟು ವರ್ಷವಾದರೂ ಮನೆ ಬಂದಿಲ್ಲ ಗ್ಯಾಸ್ ಕನೆಕ್ಷನ್

ಹುಬ್ಬಳ್ಳಿ:ಅದು ಕೇಂದ್ರ ಸರ್ಕಾರದ ಜನಪರ ಯೋಜನೆ, ಪ್ರತಿ ಮನೆ ಮನೆಗೂ ನ್ಯಾಚುರಲ್ ಗ್ಯಾಸ್ ಪೈಪ್ ಲೈನ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಜಾರಿ ಮಾಡಿರುವ ಯೋಜನೆ ನಿರೀಕ್ಷೆ ಮಟ್ಟದಲ್ಲಿ ಪೂರ್ಣಗೊಳ್ಳದೇ ವಿಳಂಬವಾಗ್ತಿದೆ. ವಿಳಂಬವಾಗುತ್ತಿರುವ ಆ ಯೋಜನೆಗೆ ಕಾರಣವಾದರೂ ಏನು ಅಂತಾ ಹೇಳ್ತೀವಿ ನೋಡಿ.

ಹೀಗೆ ಪ್ರತಿ ಮನೆ ಮನೆಗೂ ನ್ಯಾಚುರಲ್ ಗ್ಯಾಸ್ ವ್ಯವಸ್ಥೆ ಅಳವಡಿಸುವ ಮಹತ್ತರ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಐಒಸಿ ಮತ್ತು ಅದಾನಿ ಗ್ಯಾಸ್ ಕಂಪನಿಗೆ ಜಂಟಿಯಾಗಿ ಈ ಯೋಜನೆಯ ಜವಾಬ್ದಾರಿಯನ್ನು ವಹಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ 2016 ರಿಂದ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಳವಡಿಕೆ ಕಾರ್ಯ ಮುಂದುವರೆದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಯೋಜನೆ ಪೂರ್ಣಗೊಂಡಿಲ್ಲ. ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳಲ್ಲಿ ಮೂಡುತ್ತಿರುವ ನಿರಾಸಕ್ತಿ ಹಾಗೂ ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತಂತೆ ತಿಳಿವಳಿಕೆ ಹಾಗೂ ಜಾಗೃತಿ ಕೊರತೆಯೇ ಈ ಸಮಸ್ಯೆಗೆ ಕಾರಣವಾ ಅನ್ನೋ ಅನುಮಾನ ಹುಟ್ಟುಹಾಕಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನವನಗರ, ಬೈರಿದೇವರಕೊಪ್ಪ ಸೇರಿದಂತೆ 18 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಈ ಹಿನ್ನೆಲೆಯಲ್ಲಿ 2021 ಹಾಗೂ 2022 ರ ಮೇ ವರೆಗೆ ಸುಮಾರು 21 ಸಾವಿರ ಮನೆಗಳಿಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ ಅಳವಡಿಕೆಯ ಗುರಿಯನ್ನು ಈ ಕಂಪನಿಗಳು ಹೊಂದಿದ್ದವು. ಆದರೆ ಕೋವಿಡ್ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆ ಇದೀಗ ಕೇವಲ 19.500 ಸಾವಿರ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ. ಸುಮಾರು ನಾಲ್ಕು ವರ್ಷದಲ್ಲಿ ಕೇವಲ 19 ಸಾವಿರ ಮನೆಗಳಿಗೆ ಈ ಯೋಜನೆ ತಲುಪಿದ್ದು, ನಿಧಾನಗತಿಯ ಕಾಮಗಾರಿಯಿಂದ ಜನರು ಯೋಜನೆ ದಾರಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ.

ಈ ಯೋಜನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿದ್ರೆ ಮಾತ್ರ ಯೋಜನೆಯ ಉಪಯೋಗ ಸಾರ್ವಜನಿಕರಿಗೆ ದೊರೆಯಲಿದೆ. ಒಟ್ಟಿನಲ್ಲಿ ಅವಳಿ ನಗರಕ್ಕೆ ಹಲವಾರು ಯೋಜನೆ ಬಂದರೂ ಕೆಲಸ ಮಾತ್ರ ಆಮೆಗತಿಯಲ್ಲಿ ಆಗುವುದರಿಂದ ಜನರು ಯೋಜನೆ ಉಪಯುಕ್ತತೆಯ ಭರವಸೆಯನ್ನು ಮರೆಯುವಂತಾಗಿದೆ.

Edited By : Nagesh Gaonkar
Kshetra Samachara

Kshetra Samachara

06/05/2022 10:42 pm

Cinque Terre

56.45 K

Cinque Terre

7

ಸಂಬಂಧಿತ ಸುದ್ದಿ