ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ವಿಶ್ವ ಮಾನ್ಯತೆ ಪಡೆದಿದೆ ನಿಜ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿದರೇ ಎಂತವರಿಗೂ ಬೇಸರ ಮೂಡುವುದು ಖಂಡಿತ. ಇಲ್ಲಿ ಪ್ರಯಾಣಿಕರು ಆತಂಕದಲ್ಲಿಯೇ ಓಡಾಡುವಂತಾಗಿದೆ.
ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ರೈಲ್ವೆ ಪ್ಲಾಟ್ ಫಾರಂ ಮೇಲೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ಆತಂಕಕ್ಕೆ ಸಿಲುಕಿದ್ದು, ಪ್ರಯಾಣ ಮಾಡಲು ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲವೊಂದು ಸಾರಿ ನಾಯಿಗಳು ಜಗಳಕ್ಕೆ ಬಿದ್ದು ಜನರಲ್ಲಿ ಭಯವನ್ನು ಹುಟ್ಟಿಸುವ ಅದೆಷ್ಟೋ ಘಟನೆಗಳು ನಡೆದಿದ್ದರೂ ಕೂಡ ರೈಲ್ವೆ ಸಿಬ್ಬಂದಿ ಎಚ್ಚೇತ್ತುಕೊಂಡಿಲ್ಲ.
ಇನ್ನಾದರೂ ಆಧುನಿಕ ವ್ಯವಸ್ಥೆಗಳಿಂದ ಹೆಸರು ವಾಸಿಯಾಗಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಬೀದಿ ನಾಯಿಗಳ ಕಾಟ ನಿಯಂತ್ರಿಸಲು ರೈಲ್ವೆ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
03/05/2022 02:22 pm