ಕುಂದಗೋಳ : ದೀಪದ ಬುಡದಲ್ಲೇ ಕತ್ತಲು ಎಂಬಂತೆ ಕುಂದಗೋಳ ಪಟ್ಟಣದ ಪರಿವೀಕ್ಷಣಾ ಮಂದಿರ, ಗಣ್ಯ ವ್ಯಕ್ತಿಗಳ ವಿಶ್ರಾಂತಿ ಗೃಹ, ಲೋಕೋಪಯೋಗಿ ಇಲಾಖೆ ಆವರಣದಲ್ಲೇ ಮಳೆಯ ಪರಿಣಾಮ ಕಲುಷಿತ ನೀರು ಸಂಗ್ರಹವಾಗಿ ಅವ್ಯವಸ್ಥೆ ನಿರ್ಮಾಣವಾಗಿದೆ.
ಹೌದು ! ಕುಂದಗೋಳಕ್ಕೆ ಗಣ್ಯ ವ್ಯಕ್ತಿಗಳು ಯಾರೇ ಬಂದ್ರು ಮೊದಲು ಆಗಮಿಸೋದೆ ಈ ವಿಶ್ರಾಂತಿ ಗ್ರಹಕ್ಕೆ. ಇನ್ನು ಲೋಕೋಪಯೋಗಿ ಇಲಾಖೆಗೆ ನಿತ್ಯ ನೂರಾರು ಜನ ಬರ್ತಾರೆ. ಹೀಗಿದ್ದರೂ ಸಹ ಇಲ್ಲಿನ ಆವರಣ ಕಳೆದ ಹಲವಾರು ವರ್ಷಗಳಿಂದ ರಭಸದ ಮಳೆ ಸುರಿದ್ರೇ ಸಾಕು ಈ ತರಹ ಕಲುಷಿತ ನೀರಿನಿಂದ ಭರ್ತಿಯಾಗುತ್ತೆ.
ಅದು ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿನ ಚರಂಡಿಗಳು ಸಹ ಹುದುಗಿ ಹೋಗಿ, ಲೋಕೋಪಯೋಗಿ ಇಲಾಖೆ ಗೋಡೆ ಪಕ್ಕದಲ್ಲೇ ಈ ರೀತಿ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ತಲೆದೋರಿದ್ರು, ಅಧಿಕಾರಿಗಳು ಮಾತ್ರ ಇಲ್ಲಿವರೆಗೆ ಸುಮ್ಮನಿದ್ದಾರೆ. ಇನ್ನೂ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಹ ಇರುವ ಕಾರಣ ಅವಘಡಕ್ಕೂ ಮುನ್ನ ಕಲುಷಿತ ನೀರಿಗೆ ದಾರಿ ತೋರಬೇಕಿದೆ.
ಈ ಅವ್ಯವಸ್ಥೆ ನಡುವೆ ನಿತ್ಯ ಪರಿವೀಕ್ಷಣಾ ಮಂದಿರಕ್ಕೆ, ಗಣ್ಯ ವ್ಯಕ್ತಿಗಳ ವಿಶ್ರಾಂತಿ ಗೃಹಕ್ಕೆ ಬರುವ ಜನ ಇಲ್ಲಿನ ಅವ್ಯವಸ್ಥೆ ನೋಡಿ ಆಡಳಿತ ವ್ಯವಸ್ಥೆ ಶಪಿಸುತ್ತಾ ಅದೇ ರಾಡಿ ನೀರನ್ನು ದಾಟಿ ಹೋಗ್ತಾರೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಗಮನಿಸಿ ಇಲ್ಲಿನ ವ್ಯವಸ್ಥೆ ಸುಧಾರಿಸಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/04/2022 08:39 am