ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಲ್ ಆ್ಯಂಡ್ ಟಿ ಕಂಪನಿಗೆ ಅವಳಿನಗರದ ನೀರು ಪೂರೈಕೆ ಹೊಣೆ ನೀಡಿದ ಜಲಮಂಡಳಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸುಮಾರು ವರ್ಷಗಳಿಂದ‌ ನೀರು ಸರಬರಾಜು ಕಾರ್ಯವನ್ನು ಮಾಡುತ್ತಿದ್ದ ಕರ್ನಾಟಕ ಜಲಮಂಡಳಿ ಹಾಗೂ ಒಳಚರಂಡಿ ಮಂಡಳಿ ನಿರ್ವಹಣೆ ಮಾಡುತ್ತಾ ಬಂದಿದ್ದು, ಈಗ 24×7 ನೀರು ಸರಬರಾಜು ಕಾರ್ಯವನ್ನು ಖಾಸಗಿ ಕಂಪನಿಯಾದ ಎಲ್ ಆ್ಯಂಡ್ ಟಿ ಗೆ ಹಸ್ತಾಂತರ ಮಾಡಿದೆ.

ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯವು ಏಪ್ರಿಲ್ 25ಕ್ಕೆ ಪೂರ್ಣಗೊಂಡ ಬೆನ್ನಲ್ಲೆ ಇಂದಿನಿಂದ ಎಲ್ ಆ್ಯಂಡ್ ಟಿ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಖಾಸಗಿ ಕಂಪನಿಯೊಂದಕ್ಕೆ ಜವಾಬ್ದಾರಿ ವಹಿಸಿದ್ದ ಜಲಮಂಡಳಿ ಇಂದಿನಿಂದ ಖಾಸಗಿ ಕಂಪನಿಯು ಕರ್ತವ್ಯ ನಿರ್ವಹಣೆಯ ಮಾಡುವಂತೆ ಹಸ್ತಾಂತರ ಮಾಡಿದ್ದು, ಇಂದಿನಿಂದ ಎಲ್ ಆ್ಯಂಡ್ ಟಿ ಕಂಪನಿ ಕರ್ತವ್ಯ ನಿರ್ವಹಿಸುತ್ತಿದೆ.

ಅಲ್ಲದೇ ಈ ಮೊದಲು 67 ವಾರ್ಡ್ ಗಳಿದ್ದು, ಈಗ ಪ್ರಸ್ತುತ ವಾರ್ಡ್ ಮರುವಿಂಗಡಣೆ ಬಳಿಕ 82 ಆಗಿದ್ದು, ಇನ್ನುಮುಂದೆ ಖಾಸಗಿ ಕಂಪನಿಯ ನಿರ್ವಹಣೆಯಲ್ಲಿ ಮನೆಗೆ ನೀರು ಸರಬರಾಜು ಆಗಲಿದೆ.

Edited By : Nagaraj Tulugeri
Kshetra Samachara

Kshetra Samachara

26/04/2022 05:47 pm

Cinque Terre

27.7 K

Cinque Terre

12

ಸಂಬಂಧಿತ ಸುದ್ದಿ