ಕುಂದಗೋಳ : ಪಟ್ಟಣದ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಬೇಕಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ವರ್ಗಾವಣೆಗೆ ಸಿದ್ಧರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ! ಕಳೆದ ಎರಡು ವರ್ಷಗಳಿಂದ ಕುಂದಗೋಳ ಪಟ್ಟಣ ಪಂಚಾಯಿತಿಯಲ್ಲಿ ಮೂವರು ಮುಖ್ಯಾಧಿಕಾರಿಗಳು ವರ್ಗಾವಣೆಯಾದ್ರೇ ಹಾಲಿ ಮುಖ್ಯಾಧಿಕಾರಿಗಳಿಗೆ ಏ.13 ರಂದೇ ವರ್ಗಾವಣೆ ಪತ್ರ ಕೈ ಸೇರಿದೆ.
ಈ ವ್ಯವಸ್ಥೆ ಕಾರಣ ಸಾರ್ವಜನಿಕರ ಕೆಲಸಕ್ಕೆ ಅಡೆತಡೆ ಜೊತೆಗೆ ಡಿಜಿಟಲ್ ಸಹಿ ವ್ಯವಸ್ಥೆ ಕಾರಣ ಜನರ ಅಗತ್ಯ ದಾಖಲಾತಿ ನೀಡಿಕೆ ವಿಳಂಬವಾಗುತ್ತಿದೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ವೇತನ ಸಹ ಸ್ಥಗಿತಗೊಂಡಿದೆ.
ಈ ಮೊದಲು 2019 ರಲ್ಲಿ ಪ.ಪಂ ಚುನಾವಣೆ ಪೂರ್ವ ಇದ್ದ ಮುಖ್ಯಾಧಿಕಾರಿ ನಾರಾಯಣ್ ಡೊಂಬರ್ ಡಿಸೆಂಬರ್ ನಲ್ಲಿ ವರ್ಗಾವಣೆ ಬಳಿಕ 2020 ಆಗಸ್ಟ್ ತಿಂಗಳಲ್ಲಿ ರಮೇಶ್ ಗೋಂದಕರ್ ಅಧಿಕಾರ ಪಡೆದು ವರ್ಗಾವಣೆಯಾದ ಬಳಿಕ ಗಂಗಾಧರ ಸಂಕ್ಯಾನವರ ಅಧಿಕಾರ ಪಡೆದು ವರ್ಗಾವಣೆಯಾಗಿ ಮಾ.28 ರಂದು ಅಧಿಕಾರಿ ಪಡೆದ ನಾರಾಯಣ್ ಡೊಂಬರ್ ಅವರಿಗೆ ಪುನಃ ಏ.13 ರಂದು ವರ್ಗಾವಣೆ ಪತ್ರ ಬಂದಿದೆ.
ಇನ್ನೂ ಪಟ್ಟಣ ಪಂಚಾಯಿತಿ ಸದಸ್ಯರ ಬೇರೆ ಬೇರೆ ಬಣಗಳಿದ್ದು ತಮಗೆ ಬೇಕಾದ ಅಧಿಕಾರಿಯನ್ನು ಆಸನಕ್ಕೆ ಕೂರಿಸಲು, ಈ ಅವ್ಯವಸ್ಥೆ ಏರ್ಪಟ್ಟಿದೆ ಎಂಬ ಮಾತಿಗೆ ಜಿಲ್ಲಾಡಳಿತ ಉತ್ತರ ನೀಡಲಿ ಎನ್ನುವುದು ಜನರ ಅಭಿಪ್ರಾಯ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
21/04/2022 05:30 pm