ನವಲಗುಂದ: ತಹಶೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಶನಿವಾರ ನವಲಗುಂದ ತಾಲೂಕಿನ ಗೊಬ್ಬರಗುಂಪಿ ಗ್ರಾಮದಲ್ಲಿ ತಹಶೀಲ್ದಾರ್ ಅನಿಲ ಬಡಿಗೇರ ಅವರ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಕೆಲವೊಂದು ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಯಿತು.
ಇನ್ನು ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾದ ಮಹಿಳೆರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ರೈತರ ಹೊಲಗಳಿಗೆ ರಸ್ತೆ ನಿರ್ಮಾಣ, ಗೊಬ್ಬರಗುಂಪಿ ಕ್ರಾಸಿನಲ್ಲಿರುವ ಹೈಮಾಸ್ಟ್ ದೀಪದ ಚಾಲನೆ, ರೇವಣ ಸಿದ್ದೇಶ್ವರ ಮಠದ ಹದ್ದುಬಸ್ತ ಗುರುತಿಸಿಕೊಳ್ಳುವುದು, ರುದ್ರಭೂಮಿ ಬೇಡಿಕೆ, ಪಶು ಹಾಗೂ ಜಾನುವಾರುಗಳಿಗೆ ಡಾಕ್ಟರ್ ಮತ್ತು ಕೊಠಡಿ ಪೂರೈಸುವುದು, ಕಿರಿಯ ಆರೋಗ್ಯ ಸಹಾಯಕರ ಕೇಂದ್ರ ಸ್ಥಾಪನೆ, ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ, ಗ್ರಾಮದ ಪ್ಲಾಟಿನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವುದು, ಜನತಾ ಪ್ಲಾಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಜನತಾ ಪ್ಲಾಟಿನಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಕೆರೆಯ ಸುತ್ತಲೂ ಸುರಕ್ಷಿತ ಹಾಗೂ ಸದೃಢ ತಂತಿಬೇಲಿ ಅಳವಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸ್ವೀಕರಿಸಲಾಯಿತು.
ಈ ಸಂಧರ್ಭದಲ್ಲಿ ತಹಶೀಲ್ದಾರ ಅನಿಲ ಬಡಿಗೇರ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಪಿಡಿಓ, ಹಾಜರಿದ್ದರು.
Kshetra Samachara
17/04/2022 10:48 am