ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂತೂ ಇಂತು ವಾಣಿಜ್ಯ ನಗರಿಗೆ ಬಂದೆ ಬಿಟ್ತು ಬೈಸಿಕಲ್ ವ್ಯವಸ್ಥೆ

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್.....

ವರದಿ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್.ಕೆಲವೇ ಘಂಟೆಗಳಲ್ಲಿ ಬೈಸಿಕಲ್ ನಿಲ್ದಾಣಗಳಿಗೆ ಸೈಕಲ್ ವ್ಯವಸ್ಥೆ. ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೂಡಲೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಖಾಲಿ ಬಿದಿದ್ದ ಬೈಸಿಕಲ್ ನಿಲ್ದಾಣಗಳಿಗೆ ಸೈಕಲ್‌ಗಳನ್ನ ತಂದು ನಿಲ್ಲಿಸಿದ್ದಾರೆ.

ಸೈಕಲ್ ನಿಲ್ಲಬೇಕಾದ ಸ್ಥಳದಲ್ಲಿ ಡ್ರೆಸ್ ಮಾರಾಟ; ಸ್ಮಾರ್ಟ್ ಸಿಟಿ ಅಧಿಕಾರಿಗಳು ಏನ ಮಾಡ್ತಾ ಇದ್ದಾರೇ ? ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನ ನೋಡಿದ ಕೂಡಲೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೂಡಲೇ ನಿಲ್ದಾಣದಲ್ಲಿ ಸೈಕಲ್‌ಗಳನ್ನ ತಂದು ನಿಲ್ಲಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಮಾರು ವರ್ಷಗಳಿಂದ ಬೈಸಿಕಲ್ ವ್ಯವಸ್ಥೆ ಮಾಡಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿರಲಿಲ್ಲಾ. ಅದೇ ಸೈಕಲ್ ನಿಲ್ದಾಣಗಳನ್ನು ಕೆಲವರು ವ್ಯಾಪಾರಕ್ಕೆ ಬಳಿಸಿಕೊಳ್ಳುತ್ತಿದ್ದರು. ಈ ಕಾರಣಕ್ಕೇನೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಮಾಡಿತ್ತು.

ಅದರ ಪರಿಣಾಮ ಈಗ ಖಾಲಿ ಬೈಸಿಕಲ್ ನಿಲ್ದಾಣದಲ್ಲಿ ಸೈಕಲ್‌ಗಳು ಬಂದಿವೆ. ಪೆಟ್ರೋಲ್-ಡೀಸೆಲ್ ದರವೂ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿಯೇ ಹುಬ್ಬಳ್ಳಿ ಜನ ಈ ಬೈಸಿಕಲ್ ಬಳಸಿ ವಾಯು ಮಾಲಿನ್ಯವನ್ನೂ ತಡೆಯೋಕೆ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

15/04/2022 05:57 pm

Cinque Terre

78.49 K

Cinque Terre

15

ಸಂಬಂಧಿತ ಸುದ್ದಿ