ಕುಂದಗೋಳ : ಸ್ವಚ್ಛತೆ ಬಗ್ಗೆ ಗೋಡೆ ಬರಹಗಳನ್ನ, ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಹಶೀಲ್ದಾರ ಕಚೇರಿ ಪಕ್ಕದಲ್ಲೇ ಹರಿಯುವ ಚರಂಡಿಯ ಅವ್ಯವಸ್ಥೆ ಮರೆತಂತೆ ಭಾಸವಾಗುತ್ತಿದೆ.
ಇತ್ತಿಚಗಷ್ಟೆ ತಹಶೀಲ್ದಾರ ಕಚೇರಿಯ ಸುತ್ತಲೂ ನಿರ್ಮಿಸಿದ ಚರಂಡಿಯಲ್ಲಿ ಈ ತರಹ ಪ್ಲಾಸ್ಟಿಕ್ ತ್ಯಾಜ್ಯ, ಕಸ ಕಡ್ಡಿ ಸಂಗ್ರಹವಾಗಿದ್ದು ಚರಂಡಿ ಬ್ಲಾಕ್ ಆಗುವ ಹಂತ ತಲುಪಿದೆ.
ಚರಂಡಿಯಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಾಗಿ ಬಿದ್ದಿದ್ದು ಪಟ್ಟಣದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಹೆಚ್ಚಿದೆಯಾ ? ಎಂಬ ಅಂಶಕ್ಕೆ ಕೈಗನ್ನಡಿಯಾಗಿದೆ.
ಒಟ್ಟಾರೆ ತಾಲೂಕು ದಂಡಾಧಿಕಾರಿಗಳ ಕಚೇರಿ ಪಕ್ಕದ ಚರಂಡಿಯಲ್ಲೇ ಇಷ್ಟು ಅವ್ಯವಸ್ಥೆ ಕಸ ಕಡ್ಡಿ ಸಂಗ್ರಹವಾಗಿದ್ದು ತಹಶೀಲ್ದಾರ ಕಚೇರಿ ಕೌಂಟರಿನಲ್ಲಿ ಸಾಲಲ್ಲಿ ನಿಲ್ಲುವ ಜನರಿಗೆ ದುರ್ವಾಸನೆ ರೋಗದ ಭೀತಿ ಎದುರಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ಸ್ವಚ್ಛತೆ ಹಾಗೂ ತಹಶೀಲ್ದಾರ ಕಚೇರಿ ಕೌಂಟರ್ ಪಕ್ಕದ ಕೊಳಚೆಗೆ ಮುಕ್ತಿ ನೀಡಬೇಕಿದೆ.
Kshetra Samachara
13/04/2022 05:08 pm