ಕುಂದಗೋಳ : ಜನರಿಗೆ ಸ್ವಚ್ಚತೆಗೆ ಬಗ್ಗೆ ಅರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿಯೊಂದು ತಮ್ಮೂರಲ್ಲಿ ಮನೆ ಮನೆ ಹೋಗಿ ಸಂಗ್ರಹಿಸಿದ ಕಸವನ್ನು ಹಿರೇಗುಂಜಳ ರಸ್ತೆ ಪಕ್ಕದಲ್ಲಿ ವಿಲೇವಾರಿ ಮಾಡಿ ಬೆಂಕಿಯಿಟ್ಟು ಸಾರ್ವಜನಿಕರಿಗೆ ರೋಗದ ಭಾಗ್ಯ ನೀಡ್ತಾ ಇದೆ.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಆಗಿದೆ ಆದ್ರೇ, ಉದ್ಘಾಟನೆ ಕಂಡಿಲ್ಲಾ.
ಈ ಕಾರಣಕ್ಕೆ ಯರೇಬೂದಿಹಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಊರಲ್ಲಿಯ ಕಸವನ್ನು ಸ್ವಚ್ಚ ಸಂಕೀರ್ಣ ವಾಹನದಲ್ಲಿ ಸಂಗ್ರಹಿಸುವ ಮೂಲಕ ಹಿರೇಗುಂಜಳ ರಸ್ತೆ ಪಕ್ಕ ಬೇಕಾಬಿಟ್ಟಿ ಎಸೆದು ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಇದು ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ತಂದೊಡ್ಡಿದೆ.
ಈ ಬಗ್ಗೆ ಸ್ವಚ್ಚ ಸಂಕೀರ್ಣ ವಾಹನದ ಸಿಬ್ಬಂದಿ ನೀಡಿದ ಮಾಹಿತಿ ಹೀಗಿದೆ.
ಕೇಳಿದ್ರಲ್ಲಾ ಅಧಿಕಾರಿಗಳೇ ಪಾಪಾ ಸಿಬ್ಬಂದಿಗಳು ನೀವೂ ಎಲ್ಲ ಹೇಳಿದ್ದಿರೊ ಅಲ್ಲೇ ಕಸಾ ವಿಲೇವಾರಿ ಮಾಡ್ತಾರೆ. ಈ ಘಟನೆಗೆ ನೀವೂ ಏನು ಅಂತೀರಿ ?
ಒಟ್ಟಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಎಲ್ಲೇಂದರಲ್ಲಿ ಕಸ ವಿಲೇವಾರಿ ನಿಲ್ಲಿಸಿ ಮೊದಲು ನೀವು ಸ್ವಚ್ಚತೆ ಕಾಪಾಡುವ ಕರ್ತವ್ಯ ಮಾಡಿ. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ದಯವಿಟ್ಟು ಇಂತಹ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳಿ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
28/03/2022 06:31 pm